ADVERTISEMENT

Covid-19 World Updates: 2.35 ಲಕ್ಷ ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 16:20 IST
Last Updated 3 ಡಿಸೆಂಬರ್ 2020, 16:20 IST
   

ವಾಷಿಂಗ್ಟನ್: ಇಂದು ಪ್ರಪಂಚದಾದ್ಯಂತ ಹೊಸದಾಗಿ 2.35 ಲಕ್ಷ ಜನರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದು, 5,051 ಸೋಂಕಿತರು ಮೃತಪಟ್ಟಿದ್ದಾರೆ ಎಂದು ವರ್ಡೋಮೀಟರ್ ವೆಬ್‌ಸೈಟ್‌ ವರದಿಮಾಡಿದೆ. ಇದರಿಂದಾಗಿ ಪ್ರಪಂಚದಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ 6.50 ಕೋಟಿಗೂ ಹೆಚ್ಚಾಗಿದ್ದು, ಸಾವಿನ ಸಂಖ್ಯೆ 15 ಲಕ್ಷದ ಗಡಿ ದಾಟಿದೆ.

ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ರಾಷ್ಟ್ರಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಇಂದು 28,145 ಹೊಸ ಪ್ರಕರಣಗಳು ವರದಿಯಾಗಿವೆ. ಮಾತ್ರವಲ್ಲದೆ 554 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಈ ದೇಶದಲ್ಲಿ ಪ್ರಕರಣಗಳ ಸಂಖ್ಯೆ 23.75 ಲಕ್ಷಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 41,607 ಆಗಿದೆ.

ವರ್ಡೋಮೀಟರ್ ಮಾಹಿತಿ ಪ್ರಕಾರ ಇಂದು ಅಮೆರಿಕದಲ್ಲಿ 18,630, ಭಾರತದಲ್ಲಿ 23,410 ಪ್ರಕರಣಗಳು ವರದಿಯಾಗಿವೆ.

ADVERTISEMENT

4.5 ಕೋಟಿ ಸೋಂಕಿತರು ಗುಣಮುಖ
ಇಂದು 2.03 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಒಟ್ಟು ಗುಣಮುಖರಾದವರ ಸಂಖ್ಯೆ 4 ಕೋಟಿ 51 ಲಕ್ಷಕ್ಕೂ ಹೆಚ್ಚಾಗಿದೆ. 95.5 ಲಕ್ಷ ಪ್ರಕರಣಗಳು ವರದಿಯಾಗಿರುವ ಭಾರತದಲ್ಲಿ, ಈವರೆಗೆ 89.98 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಅತಿಹೆಚ್ಚು (1 ಕೋಟಿ 43 ಲಕ್ಷ) ಪ್ರಕರಣಗಳು ದಾಖಲಾಗಿರುವ ಅಮೆರಿಕದಲ್ಲಿ ಈವರೆಗೆ ಒಟ್ಟು 84 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ರಷ್ಯಾದಲ್ಲಿ 18 ಲಕ್ಷ ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಒಟ್ಟಾರೆ ಇನ್ನೂ 1.84 ಕೋಟಿ ಪ್ರಕರಣಗಳು ಸಕ್ರಿಯವಾಗಿದ್ದು, ಇದರಲ್ಲಿ 1.06 ಲಕ್ಷ ಸೋಂಕಿತರು ಗಂಭೀರ ಸ್ಥಿತಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.