ADVERTISEMENT

ಅಮೆರಿಕ: ಕಳೆದ 24 ಗಂಟೆಗಳಲ್ಲಿ 68,428 ಹೊಸ ಕೊರೊನಾ ಸೋಂಕು ಪ್ರಕರಣ, 974 ಸಾವು

ಏಜೆನ್ಸೀಸ್
Published 17 ಜುಲೈ 2020, 5:25 IST
Last Updated 17 ಜುಲೈ 2020, 5:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ಸೋಂಕು ಹರಡುವಿಕೆಯ ವೇಗ ಹೆಚ್ಚುತ್ತಲೇ ಇದ್ದು, ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಅಧಿಕ ಪ್ರಕರಣಗಳು ಕಂಡುಬಂದಿವೆ.

ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 68,428 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ.

ಕೊರೊನಾ ಸೋಂಕಿನಿಂದಾಗಿ ಅಮೆರಿಕದಲ್ಲಿ ಗುರುವಾರ ಮೃತಪಟ್ಟವರ ಸಂಖ್ಯೆ 974ಕ್ಕೆ ತಲುಪಿದ್ದು, ಈ ವರೆಗೆ ಕೋವಿಡ್‌ನಿಂದ 1,38,358 ಜನರು ಸಾವಿಗೀಡಾಗಿದ್ದಾರೆ.

ADVERTISEMENT

ನ್ಯೂಯಾರ್ಕ್‌ನಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಒಟ್ಟು 4,31,380 ಸೋಂಕಿತರು ಪತ್ತೆಯಾಗಿದ್ದಾರೆ. 32,518 ಜನರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ.

ಭಾರತೀಯರು ಹೆಚ್ಚಾಗಿ ವಾಸವಿರುವ ದಕ್ಷಿಣ ಅಮೆರಿಕದ ಟೆಕ್ಸಾಸ್‌ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,13,060ಕ್ಕೆ ತಲುಪಿದ್ದು, 3,770 ಮಂದಿ ಮೃತರಾಗಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ 3,64,554, ಫ್ಲೋರಿಡಾದಲ್ಲಿ 315,775, ನ್ಯೂ ಜೆರ್ಸಿಯಲ್ಲಿ 1,82,532 ಪ್ರಕರಣಗಳು ದಾಖಲಾಗಿದ್ದು, ಅಮೆರಿಕದಾದ್ಯಂತ 35,76,157 ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.