ADVERTISEMENT

ಕೊರೊನಾ ಸೋಂಕು ಹಿನ್ನೆಲೆ: ಇಂಗ್ಲೆಂಡ್‌ನಲ್ಲಿ ಭಾರತ ಮೂಲದ ವೈದ್ಯ ಸಾವು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 13:01 IST
Last Updated 7 ಏಪ್ರಿಲ್ 2020, 13:01 IST
   

ಲಂಡನ್‌:ಕೊರೊನಾ ವೈರಸ್‌ ಸೋಂಕಿಗೆ ಇಂಗ್ಲೆಂಡ್‌ನಲ್ಲಿ ಭಾರತಮೂಲದ ವೈದ್ಯರೊಬ್ಬರು ಬಲಿಯಾಗಿದ್ದಾರೆ.

ಸಾವಿಗೀಡಾದ ವೈದ್ಯ ಜಿತೇಂದ್ರ ಕುಮಾರ್‌ ರಾಥೋಡ್‌ ಅವರು ವೇಲ್ಸ್‌ವಿಶ್ವವಿದ್ಯಾಲಯ ಅಧೀನದಲ್ಲಿ ಬರುವ ಆಸ್ಪತ್ರೆಯಲ್ಲಿ ಕಾರ್ಡಿಯೊ ಥೋರಾಸಿಸ್‌ ಸರ್ಜರಿ ವಿಭಾಗದಲ್ಲಿ ಸಹಾಯಕ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅಲ್ಲಿನ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆಯು ರಾಥೋಡ್‌ ಅವರನ್ನು ಅತ್ಯುತ್ತಮ ಶಸ್ತ್ರ ಚಿಕಿತ್ಸಕರೆಂದೇ ಗುರುತಿಸಿತ್ತು.

ADVERTISEMENT

ರಾಥೋಡ್‌ ಅವರ ಸಾವಿಗೆ ವಿಶ್ವವಿದ್ಯಾಲಯವು ತೀವ್ರ ಸಂತಾಪ ಸೂಚಿಸಿದ್ದು, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದೆ.

58 ವರ್ಷದ ರಾಥೋಡ್‌ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.