ADVERTISEMENT

ಕೋವಿಡ್ – ಚಿಕನ್ ಫಾಕ್ಸ್‌ನಂತೆ ವೇಗವಾಗಿ ಹರಡುತ್ತದೆ ಡೆಲ್ಟಾ ರೂಪಾಂತರ: ಅಮೆರಿಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2021, 6:22 IST
Last Updated 31 ಜುಲೈ 2021, 6:22 IST
ಸಾಂದರ್ಭಿಕ ಚಿತ್ರ (ಐಸ್ಟಾಕ್)
ಸಾಂದರ್ಭಿಕ ಚಿತ್ರ (ಐಸ್ಟಾಕ್)   

ವಾಷಿಂಗ್ಟನ್:ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರವು ಚಿಕನ್ ಫಾಕ್ಸ್‌ನಂತೆ ವೇಗವಾಗಿ ಹರಡುತ್ತದೆ ಎಂದು ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರದ (ಸಿಡಿಸಿ) ಆಂತರಿಕ ದಾಖಲೆಗಳಲ್ಲಿ ಉಲ್ಲೇಖವಾಗಿರುವುದಾಗಿ ‘ದಿ ನ್ಯೂಯಾರ್ಕ್‌ ಟೈಮ್ಸ್’ ವರದಿ ಮಾಡಿದೆ.

ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಹೊರಡಿಸುವ ಮತ್ತು ಕಠಿಣ ನಿರ್ಬಂಧಗಳನ್ನು ವಿಧಿಸುವ ಎಲ್ಲ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಬೋ ಬೈಡೆನ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ.

ಅಮೆರಿಕದ ಮಾತ್ರವಲ್ಲದೆ ವಿಶ್ವದ ಇತರ ಅನೇಕ ದೇಶಗಳಲ್ಲಿಯೂ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗಲು ಡೆಲ್ಟಾ ರೂಪಾಂತರವೇ ಕಾರಣ ಎನ್ನಲಾಗಿದೆ.

ಡೆಲ್ಟಾ ರೂಪಾಂತರ ನಿರ್ದಿಷ್ಟವಾಗಿ ಮಕ್ಕಳನ್ನು ಗುರಿಯಾಗಿಸಿಲ್ಲ: ಡಬ್ಲ್ಯುಎಚ್‌ಒ

ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರವು ನಿರ್ದಿಷ್ಟವಾಗಿ ಮಕ್ಕಳನ್ನಷ್ಟೇ ಗುರಿಯಾಗಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

ಸಾಮಾಜಿಕವಾಗಿ ಹೆಚ್ಚು ಬೆರೆಯುವವರಲ್ಲಿ ಡೆಲ್ಟಾ ರೂಪಾಂತರವು ಹೆಚ್ಚು ಹರಡುತ್ತಿರುವುದು ಕಂಡುಬಂದಿದೆ ಎಂದು ಡಬ್ಲ್ಯುಎಚ್‌ಒ ಕೋವಿಡ್ ತಾಂತ್ರಿಕ ತಂಡದ ಮುಖ್ಯಸ್ಥೆ, ಅಮೆರಿಕದ ತಜ್ಞೆ ಮಾರಿಯಾ ವ್ಯಾನ್ ಕೆರ್ಖೋವ್ ಹೇಳಿದ್ದಾರೆ.

ವೈರಸ್‌ನ ಈ ಹಿಂದಿನ ರೂಪಾಂತರಗಳಿಗಿಂತ ವೇಗವಾಗಿ ಹರಡಬಲ್ಲದ್ದಾಗಿರುವ ಡೆಲ್ಟಾ ರೂಪಾಂತರ ಈಗ 132 ದೇಶಗಳಲ್ಲಿ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.