ಲಂಡನ್:ಅಪರಾಧ ಹಿನ್ನೆಲೆ ಇರುವ ಕಾರಣ ಪೂರ್ವ ಇಂಗ್ಲೆಂಡ್‌ನ ಹಾಲಿ ಸಂಸದೆಯೊಬ್ಬರನ್ನು ಮತದಾರರು ಅಧಿಕಾರದಿಂದ ಕೆಳಗಿಳಿಸಿದ್ದಾರೆ.
ಚುನಾಯಿತ ಸದಸ್ಯರೊಬ್ಬರನ್ನು ವಾಪಸು ಕಳಿಸುವ ಪ್ರಕ್ರಿಯೆಯನ್ನು 2015ರಲ್ಲಿ ಜಾರಿಗೆ ತಂದ ನಂತರ, ಸಂಸತ್ ಸದಸ್ಯ ಸ್ಥಾನದಿಂದ ಸಂಸದರೊಬ್ಬರನ್ನು ಕೆಳಗಿಳಿಸಿದ ಮೊದಲ ಪ್ರಕರಣ ಇದಾಗಿದೆ.
ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಮೂರು ತಿಂಗಳು ಕಾಲ ಜೈಲುವಾಸ ಅನುಭವಿಸಿರುವ ಲೇಬರ್ ಪಾರ್ಟಿಯ 35 ವರ್ಷ ವಯಸ್ಸಿನ ಫಿಯೋನಾ ಒನಾಸನ್ಯ ಅವರು ಸದಸ್ಯತ್ವ ಕಳೆದುಕೊಂಡವರು. ಪೀಟರ್‌ಬೊರೊ ನಗರದ ಮತದಾರರು ಫಿಯೋನಾ ಅವರನ್ನು ಸದಸ್ಯತ್ವದಿಂದ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ಲೇಬರ್ ಪಾರ್ಟಿಯಿಂದಲೂ ಅವರನ್ನು ಹೊರಹಾಕಲಾಗಿದೆ. ಈ ಕುರಿತು ಸಂಸತ್ತಿನಲ್ಲಿ ಬುಧವಾರ ರಾತ್ರಿ ಗೊತ್ತುವಳಿ ಮಂಡಿಸಲಾ
ಗಿತ್ತು. ನಂತರ ಈ ಸ್ಥಾನಕ್ಕೆ ಜೂನ್ 6 ರಂದು ಚುನಾವಣೆ ನಡೆಸಲು ಒಪ್ಪಿಗೆ ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.