ಬ್ರಸೆಲ್ಸ್: ಚೆಕ್ ಇನ್ ಮತ್ತು ಬೋರ್ಡಿಂಗ್ ನಿರ್ವಹಣೆಯ ತಂತ್ರಾಂಶದ ಮೇಲೆ ಸೈಬರ್ ದಾಳಿ ನಡೆದ ಕಾರಣದಿಂದ ಯುರೋಪ್‌ನ ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು. ಇದರಿಂದ ಪ್ರಯಾಣಿಕರು ಶನಿವಾರ ತೊಂದರೆಗೀಡಾದರು.
ದಾಳಿಯಿಂದಾಗಿ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ಚೆಕ್–ಇನ್ ಮತ್ತು ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ತೀವ್ರ ವಿಳಂಬ ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಸೆ.19ರ ಶುಕ್ರವಾರ ರಾತ್ರಿ ಬ್ರಸೆಲ್ಸ್ ಹಾಗೂ ಲಂಡನ್‌ನ ಹೀಥ್ರೂ ಸೇರಿದಂತೆ ಯುರೋಪಿನ ಅನೇಕ ವಿಮಾನ ನಿಲ್ದಾಣಗಳ ಮೇಲೆ ಸೈಬರ್ ದಾಳಿ ನಡೆದಿದೆ.
ಹಲವು ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್ ಮತ್ತು ಚೆಕ್–ಇನ್ ಸೇವೆ ಒದಗಿಸುವ ‘ಕಾಲಿನ್ಸ್ ಏರೋಸ್ಪೇಸ್’ ಕಂಪನಿಯನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎಂದು ಹೀಥ್ರೂ ವಿಮಾನ ನಿಲ್ದಾಣ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.