ADVERTISEMENT

ಭಾರತಕ್ಕೆ ಡೇನಿಯಲ್ ಸ್ಮಿತ್‌ ಅಮೆರಿಕದ ರಾಯಭಾರಿ

ಪಿಟಿಐ
Published 1 ಮೇ 2021, 21:20 IST
Last Updated 1 ಮೇ 2021, 21:20 IST
ಡೇನಿಯಲ್ ಸ್ಮಿತ್‌
ಡೇನಿಯಲ್ ಸ್ಮಿತ್‌   

ವಾಷಿಂಗ್ಟನ್‌: ಅಮೆರಿಕವು ತನ್ನ ಉನ್ನತ ರಾಜತಾಂತ್ರಿಕ, ಡೇನಿಯಲ್ ಸ್ಮಿತ್‌ ಅವರನ್ನು ಮಧ್ಯಂತರ ರಾಯಭಾರಿಯಾಗಿ ಭಾರತಕ್ಕೆ ಕಳುಹಿಸುವುದಾಗಿ ತಿಳಿಸಿದೆ. ‘ಸ್ಮಿತ್ ಅವರ ನೇಮಕವು ಭಾರತ ಸರ್ಕಾರದ ಜತೆಗೆ ಅಮೆರಿಕದ ಸಹಭಾಗಿತ್ವ ಮತ್ತು ಬಲವಾದ ಬದ್ಧತೆ
ಯನ್ನು ಪ್ರತಿಪಾದಿಸುತ್ತದೆ’ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ಹೇಳಿದೆ.

ಜೋ ಬೈಡನ್‌ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಂದಿನಿಂದ (ಜ.20) ಈ ಹುದ್ದೆ ಖಾಲಿ ಇದೆ. ಈ ನೇಮಕಕ್ಕೆ ಅಮೆರಿಕ ಸೆನೆಟ್‌ನ ಒಪ್ಪಿಗೆ ಪಡೆಯುವುದು ಅಗತ್ಯವಾಗಿದ್ದು, ಈ ಪ್ರಕ್ರಿಯೆಗೆ ಹಲವು ತಿಂಗಳುಗಳ ಕಾಲಾವಕಾಶ ಬೇಕಾಗುತ್ತದೆ. ಭಾರತವು ಮಾನವೀಯ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ನವದೆಹಲಿಯಲ್ಲಿರುವ ತನ್ನ ರಾಜತಾಂತ್ರಿಕ ಉನ್ನತ ಹುದ್ದೆಯನ್ನು ಖಾಲಿ ಇರಿಸುವುದು ಸರಿಯಲ್ಲ ಎಂಬುದು ಅಮೆರಿಕದ ಭಾವನೆಯಾಗಿದೆ.

ಅಮೆರಿಕವು ಭಾರತಕ್ಕೆ ಬೆಂಬಲವಾಗಿ ನಿಂತಿದೆ. ರಾಯಭಾರಿ ಸ್ಮಿತ್ ಅವರು ಭಾರತದೊಂದಿಗೆ ಜತೆಗೂಡಿ ಕೆಲಸ ಮಾಡಲು ಬದ್ಧರಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.