ADVERTISEMENT

ಇಸ್ರೇಲ್‌: ಮತ ಎಣಿಕೆ ಪುನಾರಂಭ, ಇನ್ನೂ ಸಿಗದ ಸ್ಪಷ್ಟ ಚಿತ್ರಣ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 11:52 IST
Last Updated 25 ಮಾರ್ಚ್ 2021, 11:52 IST
ಇಸ್ರೇಲ್‌ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಸಿಬ್ಬಂದಿ
ಇಸ್ರೇಲ್‌ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಸಿಬ್ಬಂದಿ   

ಜೆರುಸಲೆಂ (ಎ.ಪಿ): ಇಸ್ರೇಲ್‌ನಲ್ಲಿ ಮತಎಣಿಕೆ ಪ್ರಕ್ರಿಯೆ ಗುರುವಾರ ಪುನರಾರಂಭಗೊಂಡಿದೆ. ಆದರೆ, ಪ್ರಧಾನಿ ಬೆಂಜಮಿನ್‌ ನೆತನ್ಯಾಹುಅಥವಾ ಅವರ ವಿರೋಧಿ ಬಣಕ್ಕೆ ಸ್ಪಷ್ಟ ಮುನ್ನಡೆ ಸಿಗದೆ ಅನಿಶ್ಚಿತತೆ ಮುಂದುವರಿದಿದೆ.

ಮಂಗಳವಾರ ಇಸ್ರೇಲ್‌ ಸಂಸತ್ತಿಗೆ ಚುನಾವಣೆ ನಡೆದಿತ್ತು. ಇದು, ಕಳೆದ ಎರಡು ವರ್ಷಗಳಲ್ಲಿನ ನಡೆದಿರುವ ನಾಲ್ಕನೇ ಚುನಾವಣೆಯಾಗಿದೆ. ಇದು, ನೆತನ್ಯಾಹು ಅವರು ಸರ್ಕಾರ ಮುನ್ನಡೆಸಲು ಅರ್ಹರು ಎಂಬುದನ್ನು ಖಾತರಿಪಡಿಸುವ ಜನಮತಗಣನೆ ಎಂದೇ ಭಾವಿಸಲಾಗಿದೆ.

ಸಂಸತ್ತಿನ ಒಟ್ಟು ಸದಸ್ಯ ಬಲ 120 ಆಗಿದ್ದು, ಸರ್ಕಾರ ರಚನೆಗೆ ಸರಳ ಬಹುಮತ 61 ಸ್ಥಾನಗಳು ಅಗತ್ಯ. ಇದರ ಸನಿಹಕ್ಕೆ ನೆತನ್ಯಾಹು ಪರ ಅಥವಾ ವಿರೋಧಿ ಬಣ ಇನ್ನೂ ತಲುಪಿಲ್ಲ. ಮತಎಣಿಕೆಯು ಶೇ 93ರಷ್ಟು ಮುಗಿದಿದೆ. ನೆತನ್ಯಾಹು ಬಣ 52 ಕ್ಷೇತ್ರಗಳಲ್ಲಿ, ವಿರೋಧಿ ಬಣ 57 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಯೆಮಿನಾ ಪಕ್ಷ ಏಳು ಸ್ಥಾನಗಳು ಹಾಗೂ ಅರಬ್‌ ಇಸ್ಲಾಮಿಸ್ಟ್‌ ಪಾರ್ಟಿ 4 ಸ್ಥಾನ ಗೆದ್ದಿದ್ದು, ನಿರ್ಣಾಯಕ ಪಾತ್ರ ವಹಿಸಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.