ADVERTISEMENT

ಕೆನಡಾ ಶೂಟೌಟ್: 23ಕ್ಕೇರಿದ ಸಾವಿನ ಸಂಖ್ಯೆ 

ಏಜೆನ್ಸೀಸ್
Published 22 ಏಪ್ರಿಲ್ 2020, 1:20 IST
Last Updated 22 ಏಪ್ರಿಲ್ 2020, 1:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಒಟ್ಟಾವ: ಕೆನಡಾ ಪ್ರಾಂತ್ಯದ ನೋವಾ ಸ್ಕಾಟಿಯಾದ ಉತ್ತರ ಭಾಗದಲ್ಲಿ ಭಾನುವಾರ ನಡೆದ ಶೂಟೌಟ್‌ನಲ್ಲಿ ಸಾವಿಗೀಡಾದವರ ಸಂಖ್ಯೆ 23ಕ್ಕೇರಿದೆ.

17 ವರ್ಷದ ಯುವಕ ಸೇರಿದಂತೆ 23 ಮಂದಿ ಸಾವಿಗೀಡಾಗಿದ್ದಾರೆ. ಸಾವಿಗೀಡಾದ ಎಲ್ಲರೂ 18ಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದಾರೆ.

ಕೆಲವಡೆ ಮನೆ ಮತ್ತು ವಾಹನಗಳು ಬೆಂಕಿಗಾಹುತಿಯಾಗಿದ್ದು, ಅಲ್ಲಿಂದ ಶವಗಳನ್ನು ಹೊರತೆಗೆಯಲಾಗಿದೆ. ದುಷ್ಕರ್ಮಿಯು 5 ಮನೆ ಮತ್ತು ಕಟ್ಟಡಕ್ಕೆ ಬೆಂಕಿ ಹಚ್ಚುವ ಜತೆಗೆ ವಾಹನಕ್ಕೂ ಬೆಂಕಿ ಹಚ್ಚಿದ್ದನು ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.