ADVERTISEMENT

ಕೊರೊನಾವೈರಸ್: ಹೊಸ ತಳಿ ‘ಡೆಲ್ಟಾಕ್ರಾನ್‌’ ಸೋಂಕು ಪ್ರಕರಣಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 1:35 IST
Last Updated 10 ಜನವರಿ 2022, 1:35 IST
virus
virus   

ನಿಕೊಸಿಯಾ, ಸೈಪ್ರಸ್: ಕೊರೊನಾವೈರಸ್‌ನ ರೂಪಾಂತರ ತಳಿಗಳಾದ ಡೆಲ್ಟಾ ಹಾಗೂ ಓಮೈಕ್ರಾನ್‌ ಸಂಯೋಜನೆಯ ಹೊಸ ತಳಿಯ ಸೋಂಕಿನ ಪ್ರಕರಣಗಳು ಸೈಪ್ರಸ್‌ನಲ್ಲಿ ವರದಿಯಾಗಿವೆ. ವಿಜ್ಞಾನಿಗಳು ವೈರಸ್‌ನ ಈ ತಳಿಗೆ ‘ಡೆಲ್ಟಾಕ್ರಾನ್‌’ ಎಂದು ಕರೆದಿದ್ದಾರೆ.

‘ಡೆಲ್ಟಾಕ್ರಾನ್‌ ತಳಿ ಸೋಂಕಿನ 25 ಪ್ರಕರಣಗಳು ಪತ್ತೆಯಾಗಿವೆ. ರೋಗಿಗಳಲ್ಲಿ ಡೆಲ್ಟಾ ಹಾಗೂ ಓಮೈಕ್ರಾನ್‌ ಸಂಯೋಜಿತ ತಳಿಯ ಸೋಂಕು ಇರುವುದುಜಿನೋಮ್‌ ಸಿಕ್ವೆನ್ಸಿಂಗ್ ಪರೀಕ್ಷೆಯಿಂದ ಕಂಡುಬಂದಿದೆ’ ಎಂದು ಸೈಪ್ರಸ್‌ ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಲಿಯೋನ್‌ಡಿಯಾಸ್ ಕೋಸ್ಟ್ರಿಕಿಸ್‌ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

‘ಕೊರೊನಾ ವೈರಸ್‌ನ ರೂಪಾಂತರ ಪ್ರಕ್ರಿಯೆಯ ಮಾಹಿತಿ ದಾಖಲಿಸುವ ಅಂತರರಾಷ್ಟ್ರೀಯ ಸಂಸ್ಥೆಯಾದ ‘ಜಿಐಎಸ್‌ಎಐಡಿ’ಗೆ, ಡೆಲ್ಟಾಕ್ರಾನ್ ತಳಿ ಸೋಂಕಿತರ ಜಿನೋಮ್‌ ಸಿಕ್ವೆನ್ಸಿಂಗ್ ಪರೀಕ್ಷೆ ವರದಿ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಈ ತಳಿ ಹೆಚ್ಚು ರೋಗಕಾರಕವೇ, ವೇಗವಾಗಿ ಪ್ರಸರಣವಾಗುತ್ತದೆಯೇ ಎಂಬುದರ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯ ಇದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.