ADVERTISEMENT

ಕಮಲಾ ಹ್ಯಾರಿಸ್‌ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆ.19ರಂದು ನಾಮನಿರ್ದೇಶನ

ಪಿಟಿಐ
Published 17 ಆಗಸ್ಟ್ 2020, 6:54 IST
Last Updated 17 ಆಗಸ್ಟ್ 2020, 6:54 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ವಾಷಿಂಗ್ಟನ್‌:ಡೆಮಾಕ್ರಟಿಕ್‌ ಪಕ್ಷದ ರಾಷ್ಟ್ರೀಯ ಸಮಾವೇಶ ಸೋಮವಾರ ಆರಂಭವಾಗಲಿದ್ದು ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರನ್ನು ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆ.19ರಂದು ನಾರ್ಮನಿರ್ದೇಶನ ಮಾಡಲಿದೆ.

ಈ ಮೂಲಕ ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡ ಮೊದಲ ಕಪ್ಪು ವರ್ಣೀಯ ಮಹಿಳೆ ಎಂಬ ಹೆಗ್ಗಳಿಗೆ ಕಮಲಾ ಹ್ಯಾರಿಸ್‌ ಅವರು ಭಾಜನರಾಗಲಿದ್ದಾರೆ.

ಡೆಮಾಕ್ರಟಿಕ್ ಪಕ್ಷದ‌ ರಾಷ್ಟ್ರೀಯ ಸಮಾವೇಶವನ್ನು ವಿಸ್ಕಾನ್ಸಿನ್‌ನಲ್ಲಿ ಆಯೋಜಿಸಲಾಗಿತ್ತು. ಆದರೆ ಕೊರೊನಾದಿಂದಾಗಿ ಈ ಕಾರ್ಯಕ್ರಮವುವರ್ಚುವಲ್‌ ವೇದಿಕೆಯಲ್ಲಿ ನಡೆಯಲಿದೆ. ಈ ವೇಳೆ ಹಿರಿಯ ನಾಯಕರು, ಪಕ್ಷದ ಬೆಂಬಲಿಗರು ಸೇರಿದಂತೆ ಸಾವಿರರು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ADVERTISEMENT

ಇದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರಾದ ಬರಾಕ್‌ ಒಬಾಮ, ಬಿಲ್ ಕ್ಲಿಂಟನ್ಅವರಷ್ಟೇ ಅಲ್ಲದೆ ಮಿಶೆಲ್‌ ಒಬಾಮ, ಹಿಲರಿ ಕ್ಲಿಟನ್ ಅವರೂ‌ ಭಾಗವಹಿಸಲಿದ್ದಾರೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.