ADVERTISEMENT

ತುರ್ತು ಸಮಯದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಅನುಮತಿ: ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಣೆ

ಏಜೆನ್ಸೀಸ್
Published 24 ಆಗಸ್ಟ್ 2020, 6:50 IST
Last Updated 24 ಆಗಸ್ಟ್ 2020, 6:50 IST
ಪ್ಲಾಸ್ಮಾ ಸಂಗ್ರಹಿಸುವ ಪ್ರಕ್ರಿಯೆ (ಸಾಂದರ್ಭಿಕ ಚಿತ್ರ)
ಪ್ಲಾಸ್ಮಾ ಸಂಗ್ರಹಿಸುವ ಪ್ರಕ್ರಿಯೆ (ಸಾಂದರ್ಭಿಕ ಚಿತ್ರ)   

ವಾಷಿಂಗ್ಟನ್‌: ಕೋವಿಡ್ 19 ಸೋಂಕಿತರಿಗೆ ತುರ್ತು ಸಮಯದಲ್ಲಿ ಪ್ಲಾಸ್ಮಾ ಚಿಕಿತ್ಸೆ ಕೊಡಲು ಅನುಮತಿ ನೀಡಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಹಿರಿಯ ವೈದ್ಯಕೀಯ ಅಧಿಕಾರಿಯೊಬ್ಬರುಕೋವಿಡ್‌ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ಉತ್ತಮ ವಿಧಾನ ಎಂದು ಹೇಳಿದ್ದು ಮತ್ತು ಇನ್ನೂ ಕೆಲವು ಆರೋಗ್ಯ ಪರಿಣತರು ’ಈ ಚಿಕಿತ್ಸೆ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಬೇಕಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಟ್ರಂಪ್ ಅವರು ತುರ್ತುಪರಿಸ್ಥಿತಿಯಲ್ಲಿ ಪ್ಲಾಸ್ಮಾ ಚಿಕಿತ್ಸಾ ವಿಧಾನ ಬಳಸಲು ಅಧಿಕಾರ ನೀಡಿದ್ದಾರೆ.

ಆಹಾರ ಮತ್ತು ಔಷಧ ಇಲಾಖೆ ಲಸಿಕೆ ತಯಾರಿಕೆಗೆ ಅನುಮತಿ ನೀಡುವಲ್ಲಿ ರಾಜಕೀಯ ಮಾಡುತ್ತಿದ್ದು, ಇದು ಟ್ರಂಪ್ ಅವರು ಚುನಾವಣೆಯಲ್ಲಿ ಪುನರಾಯ್ಕೆಯಾಗುವುದರ ಮೇಲೆ ಪರಿಣಾಮಬೀರಬಹುದೆಂಬ ಶ್ವೇತಭವನದ ಅಧಿಕಾರಿಗಳು ಆರೋಪಿಸಿದ ನಂತರ ಟ್ರಂಪ್ ಅವರು ಈ ಪ್ಲಾಸ್ಮಾಚಿಕಿತ್ಸೆಯ ತುರ್ತು ಅಧಿಕಾರವನ್ನು ಘೋಷಿಸಿದ್ದಾರೆ. ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಷನ್‌ ನಂತರ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಅವರು ಪ್ಲಾಸ್ಮ ಚಿಕಿತ್ಸೆ ನೀಡುವ ತುರ್ತು ಅಧಿಕಾರವನ್ನು ಪ್ರಕಟಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.