ADVERTISEMENT

ಜೊ ಬೈಡನ್‌ ಪರ ಒಬಾಮ ಪ್ರಚಾರ ಪರಿಣಾಮ ಬೀರದು: ಡೊನಾಲ್ಡ್ ಟ್ರಂಪ್‌

ಪಿಟಿಐ
Published 22 ಅಕ್ಟೋಬರ್ 2020, 7:36 IST
Last Updated 22 ಅಕ್ಟೋಬರ್ 2020, 7:36 IST
ಡೊನಾಲ್ಡ್ ಟ್ರಂಪ್‌
ಡೊನಾಲ್ಡ್ ಟ್ರಂಪ್‌   

ವಾಷಿಂಗ್ಟನ್‌:ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೊ ಬೈಡನ್‌ ಪರ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಚುನಾವಣೆ ಪ್ರಚಾರ ಕೈಗೊಂಡಿದ್ದರೂ, ಯಾವುದೇ ಪರಿಣಾಮವಾಗದು ಎಂದು ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ನಾರ್ಥ್ ಕ್ಯಾರೋಲಿನಾದ ಗ್ಯಾಸ್ಟೋನಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, ‘ಬೈಡನ್‌ ಪರ ಒಬಾಮ ಪ್ರಚಾರ ಮಾಡುತ್ತಿರುವುದು ಒಳ್ಳೆಯ ಸುದ್ದಿ.ಒಬಾಮ ಅವರು ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದರಿಂದಲೇ ಜನರು ನನ್ನನ್ನು ಆಯ್ಕೆ ಮಾಡಿ ಶ್ವೇತಭವನಕ್ಕೆ ಕಳಿಸಿದರು’ ಎಂದೂ ತಿರುಗೇಟು ನೀಡಿದ್ದಾರೆ.

‘2016ರಲ್ಲಿ ಹಿಲರಿ ಕ್ಲಿಂಟನ್‌ ಪರವೂ ಒಬಾಮ ಭರ್ಜರಿ ಪ್ರಚಾರ ನಡೆಸಿದ್ದರಲ್ಲವೇ’ ಎಂದೂ ಪ್ರಶ್ನಿಸಿದರು.

ADVERTISEMENT

‘ನಾನು ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯೇ ಅಲ್ಲ ಎಂದು ಒಬಾಮ ಹೇಳಿದರು. ಆಮೇಲೆ ನಾನು ಅಭ್ಯರ್ಥಿಯಾದೆ. ನಾನು ಅಧ್ಯಕ್ಷನಾಗಲು ಸಾಧ್ಯವೇ ಇಲ್ಲ ಎಂದರು. ನಂತರ ನಡೆದ ಚುನಾವಣೆಯಲ್ಲಿ ನಾನು ಗೆದ್ದೆ. ಫಲಿತಾಂಶ ಪ್ರಕಟಗೊಂಡ ದಿನ ಹಿಲರಿ ಕ್ಲಿಂಟನ್‌ ಬಿಟ್ಟರೆ ಬಹಳ ದುಃಖದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಎಂದರೆ ಬರಾಕ್‌ ಒಬಾಮ ಮಾತ್ರ’ ಎಂದು ಟ್ರಂಪ್‌ ಅವರು ತಮ್ಮ ಬೆಂಬಲಿಗರ ಕರತಾಡನದ ನಡುವೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.