ADVERTISEMENT

ಶ್ವೇತಭವನದ ಹೊರಗಡೆ ಶಂಕಿತ ವ್ಯಕ್ತಿ ಮೇಲೆ ಗುಂಡು: ಡೊನಾಲ್ಡ್ ಟ್ರಂಪ್

ಏಜೆನ್ಸೀಸ್
Published 11 ಆಗಸ್ಟ್ 2020, 2:36 IST
Last Updated 11 ಆಗಸ್ಟ್ 2020, 2:36 IST
ಡೊನಾಲ್ಡ್ ಟ್ರಂಪ್  (ರಾಯಿಟರ್ಸ್ ಚಿತ್ರ)
ಡೊನಾಲ್ಡ್ ಟ್ರಂಪ್ (ರಾಯಿಟರ್ಸ್ ಚಿತ್ರ)   

ವಾಷಿಂಗ್ಟನ್: ಶ್ವೇತಭವನದ ಹೊರಗೆ ಶಸ್ತ್ರಧಾರಿಯಾಗಿದ್ದ ವ್ಯಕ್ತಿಯ ಮೇಲೆ ಸೀಕ್ರೆಟ್ ಸರ್ವೀಸ್ ಗಾರ್ಡ್‌ಗಳು ಗುಂಡು ಹಾರಿಸಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೆ ನಿಲ್ಲಿಸಿ ಸುರಕ್ಷಿತ ಸ್ಥಳಕ್ಕೆ ಹೋದ ಮೇಲೆ ಟ್ರಂಪ್ ಈ ಮಾಹಿತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿ ನಡೆಯುತ್ತಿದ್ದಂತೆಹಠಾತ್ತನೆ ನಿಲ್ಲಿಸಿ, ಶ್ವೇತಭವನದ ಸುತ್ತಲೂ ರಹಸ್ಯ ಸೇವಾ ಸಿಬ್ಬಂದಿ ಸಶಸ್ತ್ರಧಾರಿಗಳಾಗಿ ಧಾವಿಸಿದರು. ಕೆಲವು ನಿಮಿಷಗಳ ನಂತರ ಮತ್ತೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ಟ್ರಂಪ್, ಶ್ವೇತಭವನದ ಹೊರಗಡೆ ಒಬ್ಬ ವ್ಯಕ್ತಿಗೆ ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಶಂಕಿತ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆ ವ್ಯಕ್ತಿ ಯಾರು?ಆತನ ಉದ್ದೇಶ ಏನು ಎಂಬುದು ತಿಳಿದಿಲ್ಲ. ಆದರೆ ಆತ ಶಸ್ತ್ರಧಾರಿಯಾಗಿದ್ದನೇ ಎಂದು ಕೇಳಿದಾಗ, ಹೌದು. ಹಾಗಂತ ನನಗೆ ತಿಳಿದು ಬಂತು ಎಂದು ಟ್ರಂಪ್ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.