
ಡೊನಾಲ್ಡ್ ಟ್ರಂಪ್
(ಪಿಟಿಐ ಚಿತ್ರ)
ನ್ಯೂಯಾರ್ಕ್/ವಾಷಿಂಗ್ಟನ್: ಭಾರತದೊಂದಿಗೆ ಮಾತುಕತೆ ಉತ್ತಮವಾಗಿ ಸಾಗುತ್ತಿದೆ ಎಂದಿರುವ ಅಮೆರಿಕ ಅದ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದಿದ್ದಾರೆ.
ಬಹುತೇಕ ಭಾರತದ ತೈಲ ಕಂಪನಿಗಳು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿವೆ ಎಂದಿರುವ ಟ್ರಂಪ್, ಮೋದಿ ನನ್ನ ಸ್ನೇಹಿತ, ಮತ್ತು ನಾವು ಮಾತನಾಡುತ್ತಿದ್ದೇವೆ... ನಾನು ಭಾರತಕ್ಕೆ ಬರಬೇಕು ಎಂದು ಅವರು ಬಯಸುತ್ತಾರೆ. ನಾನು ಹೋಗುತ್ತೇನೆ. ಮೋದಿ ಮಹಾನ್ ವ್ಯಕ್ತಿ. ನಾನು ಭಾರತಕ್ಕೆ ಭೇಟಿ ನೀಡುತ್ತೇನೆ’ ಎಂದಿದ್ದಾರೆ.
ಇದೇ ವೇಳೆ, ಸುಂಕ ಹೇರುವ ಮೂಲಕ ಭಾರತ–ಪಾಕಿಸ್ತಾನದ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.
‘ನಾನು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಸುಂಕ ನೀತಿಯಿಂದಾಗಿ ಐದು ಅಥವಾ ಆರು ಯುದ್ಧಗಳು ನಿಂತಿವೆ. ಅದಕ್ಕೆ ಉದಾಹರಣೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ನಿಲ್ಲಿಸಿರುವುದು. ನೀವು ಹೋರಾಡಲು ಹೋದರೆ, ನಾನು ನಿಮ್ಮ ಮೇಲೆ ಸುಂಕಗಳನ್ನು ವಿಧಿಸುತ್ತೇನೆ ಎಂದು ಹೇಳಿದೆ. ಆದರೂ ಅವರು ಸಂಘರ್ಷಕ್ಕೆ ಇಳಿದರು. ನಂತರ 24 ಗಂಟೆಗಳ ಒಳಗೆ, ನಾನು ಯುದ್ಧವನ್ನು ಇತ್ಯರ್ಥಪಡಿಸಿದೆ. ನಾನು ಸುಂಕ ವಿಧಿಸದಿದ್ದರೆ ಯುದ್ಧ ಇತ್ಯರ್ಥವಾಗುತ್ತಿರಲಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.