
ವಾಷಿಂಗ್ಟನ್: ವಿವಿಧ ದೇಶಗಳಲ್ಲಿ ರಾಯಭಾರಿಗಳಾಗಿ ಮತ್ತು ಇತರ ಹಿರಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 30 ಅನುಭವಿ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.
‘ಅಮೆರಿಕಕ್ಕೆ ಮೊದಲ ಆದ್ಯತೆ’ ನೀತಿಯನ್ನು ಬೆಂಬಲಿಸುವ ವ್ಯಕ್ತಿಗಳಿಗೆ ವಿದೇಶಾಂಗ ವ್ಯವಹಾರಗಳನ್ನು ವಹಿಸಲು ಟ್ರಂಪ್ ಆಡಳಿತ ನಿರ್ಧರಿಸಿದೆ.
ಆಫ್ರಿಕಾ ಖಂಡದ ಬುರುಂಡಿ, ಕ್ಯಾಮರೂನ್, ಕೇಪ್ ವರ್ಡೆ, ಗ್ಯಾಬೊನ್, ಐವರಿ ಕೋಸ್ಟ್, ಮಡಗಾಸ್ಕರ್, ಮಾರಿಷಸ್, ನೈಜರ್, ನೈಜೀರಿಯಾ, ರುವಾಂಡಾ, ಸೆನೆಗಲ್, ಸೊಮಾಲಿಯಾ ಮತ್ತು ಉಗಾಂಡಾ, ಏಷ್ಯಾದ ನೇಪಾಳ, ಶ್ರೀಲಂಕಾ, ಫಿಜಿ, ಲಾವೋಸ್, ಮಾರ್ಷಲ್ ದ್ವೀಪಗಳು, ಪಪುವಾ ನ್ಯೂಗಿನಿಯಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂ, ಯುರೋಪ್‌ನ ಅರ್ಮೇನಿಯಾ, ಮ್ಯಾಸಿಡೋನಿಯಾ, ಮಾಂಟೆನೆಗ್ರೊ ಮತ್ತು ಸ್ಲೋವಾಕಿಯಾ, ಮಧ್ಯಪ್ರಾಚ್ಯದ ಅಲ್ಜೀರಿಯಾ, ಈಜಿಪ್ಟ್ ಹಾಗೂ ಗ್ವಾಟೆಮಾಲಾ, ಸುರಿನಾಮ್‌ನ ರಾಯಭಾರಿಗಳನ್ನು ವಾಪಸ್ ಕರೆಸಿಕೊಳ್ಳಲಾಗುತ್ತದೆ.
ಈ ರಾಯಭಾರಿಗಳು ಹಾಗೂ ರಾಜತಾಂತ್ರಿಕ ಅಧಿಕಾರಿಗಳು ಜೋ ಬೈಡನ್ ಅಧ್ಯಕ್ಷರಾಗಿದ್ದಾಗ ನೇಮಕಗೊಂಡವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.