
ಅಮೆರಿಕದ ಟ್ರಂಪ್, ಚೀನಾದ ಜಿನ್‌ಪಿಂಗ್
ಬೂಸಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ದಕ್ಷಿಣ ಕೊರಿಯಾದ ಬೂಸಾನ್ ನಗರದಲ್ಲಿ ಆರು ವರ್ಷಗಳ ನಂತರ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾದರು.
ಇದು ಟ್ರಂಪ್ ಅವರ ಎರಡನೇ ಅವಧಿ ಆರಂಭವಾದ ನಂತರದ ಮೊದಲ ಭೇಟಿಯಾಗಿದೆ.
ಸಭೆಗೂ ಮುನ್ನ ಮಾತನಾಡಿದ ಟ್ರಂಪ್ ಈ ಭೇಟಿಯು ಯಶಸ್ವಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಉಭಯ ದೇಶಗಳ ನಡುವೆ ಉಲ್ಬಣಗೊಂಡ ಸುಂಕ ಸಮರಕ್ಕೆ ಈ ಸಭೆಯು ತಾತ್ಕಾಲಿಕ ವಿರಾಮ ನೀಡಲಿದೆ ಎನ್ನಲಾಗಿದೆ.
ಟ್ರಂಪ್ ಜೊತೆ ಮಾತನಾಡಿದ ಷಿ ಜಿನ್‌ಪಿಂಗ್, ನಿಮ್ಮನ್ನು ಮತ್ತೆ ನೋಡಿ ಸಂತೋಷವಾಯಿತು ಎಂದರು.
ಈ ವಾರದಲ್ಲಿ ಉಭಯ ದೇಶಗಳ ಅಧಿಕಾರಿಗಳು ಸುಂಕದ ಕುರಿತಾಗಿ ಮಾತಕತೆ ನಡೆಸಿ ಯೋಜನೆಯೊಂದನ್ನು ತಯಾರಿಸಿದ್ದಾರೆ. ಇದು ಉತ್ತಮ ಫಲಿತಾಂಶ ತಂದುಕೊಡಲಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಹಾಗೂ ಷಿ ಜಿನ್‌ಪಿಂಗ್ ಜೊತೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.