ADVERTISEMENT

‘ಚೀನಾಕೆ ಯಾರದೇ ನಿರ್ದೇಶನ ಬೇಡ’: ಷಿ ಜಿನ್‌ಪಿಂಗ್‌

ಏಜೆನ್ಸೀಸ್
Published 18 ಡಿಸೆಂಬರ್ 2018, 19:37 IST
Last Updated 18 ಡಿಸೆಂಬರ್ 2018, 19:37 IST
ಷಿ ಜಿನ್‌ಪಿಂಗ್‌
ಷಿ ಜಿನ್‌ಪಿಂಗ್‌    

ಬೀಜಿಂಗ್‌: ‘ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಚೀನಾಕ್ಕೆ ಯಾರೂ ನಿರ್ದೇಶಿಸಲಾಗದು’ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್‌ ಮಂಗಳವಾರ ಹೇಳಿದರು.

ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದ 40ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಡೆಂಗ್‌ ಕ್ಸಿಯೋಪಿಂಗ್‌ 1978ರಲ್ಲಿ ಆರಂಭಿಸಿದ್ದ ಆರ್ಥಿಕ ಸುಧಾರಣೆಗಳು ಹಾಗೂ ಅದರ ಪರಿಣಾಮ ದೇಶ ಸಾಧಿಸಿದ ಅಭಿವೃದ್ಧಿಯನ್ನು ದೇಶದ ಜನತೆ ಮುಂದಿಟ್ಟರು.

ಅಮೆರಿಕದ ಕಂಪನಿಗಳಿಗೆ ಆದ್ಯತೆ ನೀಡಬೇಕು ಹಾಗೂ ಬೌದ್ಧಿಕ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಡೊನಾಲ್ಡ್‌ ಟ್ರಂಪ್‌ ಆಡಳಿತ ಚೀನಾದ ಮೇಲೆ ಒತ್ತಡ ಹೇರುತ್ತಿರುವ ಸಂದರ್ಭದಲ್ಲಿಯೇ ಷಿ ಅವರ ಈ ಮಾತುಗಳಿಗೆ ಮಹತ್ವ ಬಂದಿದೆ.

ADVERTISEMENT

‘ಮತ್ತೊಬ್ಬರು ತಮ್ಮ ಆಚಾರ–ವಿಚಾರಗಳನ್ನು ಇನ್ನೊಬ್ಬರ ಮೇಲೆ ಹೇರುವುದನ್ನು, ಮತ್ತೊಂದು ದೇಶದ ಆಂತರಿಕ ವಿದ್ಯಮಾನಗಳಲ್ಲಿ ಇನ್ನೊಂದು ದೇಶ ಹಸ್ತಕ್ಷೇಪ ಮಾಡುವುದನ್ನು ನಾವು ವಿರೋಧಿಸುತ್ತೇವೆ’ ಎಂದು ಷಿ ಅವರು ಪರೋಕ್ಷವಾಗಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.