ADVERTISEMENT

ಇರಾಕ್: ತೈಲೋತ್ಪಾದನಾ ಘಟಕದ ಮೇಲೆ ಡ್ರೋನ್‌ ದಾಳಿ

ಏಜೆನ್ಸೀಸ್
Published 16 ಜುಲೈ 2025, 14:16 IST
Last Updated 16 ಜುಲೈ 2025, 14:16 IST
ತೈಲೋತ್ಪಾದನಾ ಘಟಕದ ಮೇಲಿನ ಡ್ರೋನ್ ದಾಳಿಯಿಂದಾಗಿ ಹೊಗೆ ಆವರಿಸಿರುವುದು – ಎಎಫ್‌ಪಿ ಚಿತ್ರ
ತೈಲೋತ್ಪಾದನಾ ಘಟಕದ ಮೇಲಿನ ಡ್ರೋನ್ ದಾಳಿಯಿಂದಾಗಿ ಹೊಗೆ ಆವರಿಸಿರುವುದು – ಎಎಫ್‌ಪಿ ಚಿತ್ರ   

ಬಾಗ್ದಾದ್‌: ಇರಾಕ್‌ನ ಮತ್ತೊಂದು ತೈಲೋತ್ಪಾದನಾ ಘಟಕದ ಮೇಲೆ ಡ್ರೋನ್ ದಾಳಿ ನಡೆದಿದೆ.

ಝಾಕೋ ಜಿಲ್ಲೆಯಲ್ಲಿನ ತೈಲೋತ್ಪಾದನಾ ಘಟಕದ ಮೇಲೆ ಎರಡು ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ. ಘಟಕಕ್ಕೆ ಹಾನಿಯಾಗಿದೆ ಆದರೆ ಯಾರಿಗೂ ಗಾಯಗಳಾಗಿಲ್ಲ ಎಂದು ಕುರ್ದಿಶ್‌ ಭಾಗದ ಭಯೋತ್ಪಾದನಾ ನಿಗ್ರಹ ಇಲಾಖೆ ತಿಳಿಸಿದೆ.

ಯಾವುದೇ ಸಂಘಟನೆಯೂ ಈವರೆಗೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. 

‘ಕುರ್ದಿಸ್ತಾನ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಮತ್ತು ನೌಕರರ ಸುರಕ್ಷತೆಗೆ ಬೆದರಿಕೆ ಒಡ್ಡಲು ದಾಳಿಗಳನ್ನು ನಡೆಸಲಾಗುತ್ತಿದೆ’ ಎಂದು ಕುರ್ದಿಶ್‌ ಪ್ರದೇಶದ ನೈಸರ್ಗಿಕ ಸಂಪನ್ಮೂಲ ಸಚಿವರು ತಿಳಿಸಿದ್ದಾರೆ.

ಇರಾಕ್‌ನ ದೋಹುಕ್ ಪ್ರಾಂತ್ಯದಲ್ಲಿ ಅಮೆರಿಕ ಕಂಪನಿಯ ತೈಲೋತ್ಪಾದನಾ ಘಟಕದ ಮೇಲೆ ದಾಳಿ ನಡೆದ ಬೆನ್ನಲ್ಲೇ ಝಾಕೋ ಜಿಲ್ಲೆಯಲ್ಲಿಯೂ ದಾಳಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.