ADVERTISEMENT

ದುಬೈನಲ್ಲಿ ಪಾಕಿಸ್ತಾನ ಪ್ರಜೆ ದಾಳಿ; ತೆಲಂಗಾಣದ ಇಬ್ಬರ ಸಾವು

ಪಿಟಿಐ
Published 16 ಏಪ್ರಿಲ್ 2025, 14:37 IST
Last Updated 16 ಏಪ್ರಿಲ್ 2025, 14:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಪಾಕಿಸ್ತಾನದ ಪ್ರಜೆಯೊಬ್ಬ ದುಬೈನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ ಇಬ್ಬರನ್ನು ಇರಿದು ಕೊಂದಿದ್ದಾನೆ. ಹಲ್ಲೆಯಿಂದಾಗಿ ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೃತಪಟ್ಟವರನ್ನು ತೆಲಂಗಾಣದ ನಿರ್ಮಲ್‌ ಜಿಲ್ಲೆಯ ಅಷ್ಟಪು ಪ್ರೇಮಸಾಗರ್‌ (35) ಹಾಗೂ ನಿಜಾಮಾಬಾದ್‌ ಜಿಲ್ಲೆಯ ಶ್ರೀನಿವಾಸ್‌ ಎಂದು ಗುರುತಿಸಲಾಗಿದೆ. ನಿಜಾಮಾಬಾದ್‌ನ ಸಾಗರ್‌ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದುಬೈನ ‘ಮಾಡರ್ನ್‌ ಬೇಕರಿ ಎಲ್‌ಎಲ್‌ಸಿ’ಯಲ್ಲಿ ಏ. 11ರಂದು ಈ ಘಟನೆ ನಡೆದಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್‌ ಕುಮಾರ್‌ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. ದಾಳಿಕೋರನು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಖಡ್ಗದಿಂದ ಇರಿದು ಕೊಂದಿದ್ದಾನೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ADVERTISEMENT

ಕೇಂದ್ರ ಸಚಿವ ಜಿ. ಕಿಶನ್‌ ರೆಡ್ಡಿ ಅವರು ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರುವ ಬಗ್ಗೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರೊಂದಿಗೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.