ADVERTISEMENT

ಇಂಡೋನೇಷ್ಯಾ ಸಮುದ್ರದಲ್ಲಿ 7.5ರಷ್ಟು ತೀವ್ರತೆಯ ಭೂಕಂಪ, ಸುನಾಮಿ ಅಪಾಯವಿಲ್ಲ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 4:43 IST
Last Updated 24 ಜೂನ್ 2019, 4:43 IST
   

ಜಕಾರ್ತಾ:ಇಂಡೋನೇಷ್ಯಾದ ದೂರದ ಸ್ಥಳ ಬಂಡಾ ಸಮುದ್ರದಲ್ಲಿ ಸೋಮವಾರ ಬೆಳಿಗ್ಗೆ 7.5ರಷ್ಟು ತೀವ್ರತೆಯ ಭೂಕಂಪ ಸಭಂವಿಸಿದೆ.

ಬೆಳಿಗ್ಗೆ 8.30ಕ್ಕೆ ಭೂಕಂಪ ಸಂಭವಿಸಿದ್ದು, ಅದರ ತೀವ್ರತೆ 7.5ರಷ್ಟು ದಾಖಲಾಗಿದೆ ಎಂದು ಅಮೆರಿಕ ಭೂ ವೈಜ್ಞಾನಿಕ ಸಮೀಕ್ಷೆ ಸಂಸ್ಥೆ(ಯುಎಸ್‌ಜಿಎಸ್‌) ಹೇಳಿದೆ.

ಆದರೆ, ಯಾವುದೇ ಸುನಾಮಿ ಸಂಭವಿಸುವ ಬಗ್ಗೆ ಮುನ್ನೆಚ್ಚರಿಕೆ ನೀಡಿಲ್ಲ.

ADVERTISEMENT

220 ಕಿ.ಮೀ. ಭೂಮಿಯಾಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಸಂಸ್ಥೆ ಹೇಳಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಇಂಡೋನೇಷ್ಯಾದಲ್ಲಿಭೂಕಂಪನ ಸಂಭವಿಸಿರು ಕುರಿತು ಭಾರತೀಯ ಹವಾಮಾನ ಇಲಾಖೆ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.