ADVERTISEMENT

ಅಲಾಸ್ಕಾದಲ್ಲಿ ಭೂಕಂಪ: ಸುನಾಮಿ ಎಚ್ಚರಿಕೆ ರದ್ದು    

ಎಪಿ
Published 16 ಜುಲೈ 2023, 15:59 IST
Last Updated 16 ಜುಲೈ 2023, 15:59 IST
ಸುನಾಮಿ ಎಚ್ಚರಿಕೆ
ಸುನಾಮಿ ಎಚ್ಚರಿಕೆ   

ವಾಷಿಂಗ್ಟನ್ (ಎಪಿ): ಅಮೆರಿಕದ ಅಲಾಸ್ಕಾದಲ್ಲಿ ಶನಿವಾರ ರಾತ್ರಿ ಸಂಭವಿಸಿದ 7.2ರ ತೀವ್ರತೆಯ ಪ್ರಬಲ ಭೂಕಂಪನದಿಂದಾಗಿ, ಸುನಾಮಿ ಭೀತಿ ಎದುರಾಗಿತ್ತು.

ಅಲಾಸ್ಕಾದ ಸೌತ್‌ ಸ್ಯಾಂಡ್‌ ಪಾಯಿಂಟ್‌ನ ದಕ್ಷಿಣಕ್ಕೆ 21 ಕಿ.ಮೀ ಆಳದಲ್ಲಿ ಭೂಕಂಪ ಉಂಟಾಗಿತ್ತು. ಹೀಗಾಗಿ ಅಲಾಸ್ಕಾ ದ್ವೀಪಗಳು, ಪೆನಿನ್ಸುಲಾ ಮತ್ತು ಕೂಕ್‌ ಇನ್ಲೆಟ್‌ಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು.

ಭೂಕಂಪನ ಉಂಟಾಗುತ್ತಲೇ ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವೆಗಳ ಇಲಾಖೆಯು ದಕ್ಷಿಣ ಅಲಾಸ್ಕಾಕ್ಕೆ ಸುನಾಮಿ ಎಚ್ಚರಿಕೆ ರವಾನಿಸಿ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚಿಸಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಸುನಾಮಿ ಎಚ್ಚರಿಕೆಯನ್ನು ಹಿಂಪಡೆಯಿತು.  

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.