ADVERTISEMENT

ಲಂಡನ್: ಎಡಿನ್‌ಬರ್ಗ್‌ನಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬನಿಂದ ಹಲವರಿಗೆ ಚಾಕು ಇರಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2026, 11:35 IST
Last Updated 2 ಮಾರ್ಚ್ 2026, 11:35 IST
   

ಲಂಡನ್: ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್‌ನಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ಚಾಕುವಿನಿಂದ ಕಂಡಕಂಡ ಜನರಿಗೆ ಇರಿದಿದ್ದಾನೆ.

ಇದರಿಂದ ಹತ್ತಾರು ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಕೈಯಲ್ಲಿ ಎರಡು ಹರಿತವಾದ ಚಾಕು ಹಿಡಿದು ಯುವಕನೊಬ್ಬ ಎಡಿನ್‌ಬರ್ಗ್‌ನ ಕ್ಲಾಡರ್ಸ್ ಪ್ರದೇಶದ ಪ್ರಾಥಮಿಕ ಶಾಲೆ ಹಾಗೂ ಮಾಲ್‌ ಒಂದರ ಬಳಿ ಜನರಿಗೆ ಇರಿದಿದ್ದಾನೆ. ಅಂಗಡಿಯನ್ನು ದ್ವಂಸಗೊಳಿಸಿದ್ದಾನೆ.

ADVERTISEMENT

ಬಳಿಕ ಅಲ್ಲಿಂದ ಮತ್ತೆ ಬೇರೆ ಬೇರೆ ಪ್ರದೇಶಗಳಿಗೆ ತೆರಳಿ ಹುಚ್ಚಾಟ ಮೆರೆದಿದ್ದಾನೆ. ಸದ್ಯ ಆತನ ಪತ್ತೆಗೆ ತೀವ್ರ ಹುಡುಕಾಟ ನಡೆಸುತ್ತಿದ್ದು ಜನರು ಮನೆ ಬಿಟ್ಟು ಹೊರಗೆ ಬರದಂತೆ ಪೊಲೀಸರು ಸೂಚನೆ ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.