ADVERTISEMENT

ಓಮೈಕ್ರಾನ್‌: ಈಜಿಪ್ಟ್‌ನಲ್ಲಿ ಮೂರು ಪ್ರಕರಣಗಳು ವರದಿ

ಏಜೆನ್ಸೀಸ್
Published 18 ಡಿಸೆಂಬರ್ 2021, 12:13 IST
Last Updated 18 ಡಿಸೆಂಬರ್ 2021, 12:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೈರೊ: ಕೊರೊನಾ ವೈರಸ್‌ ಓಮೈಕ್ರಾನ್‌ ತಳಿ ಸೋಂಕಿನ ಮೂರು ಪ್ರಕರಣಗಳು ಈಜಿಪ್ಟ್‌ನಲ್ಲಿ ವರದಿಯಾಗಿವೆ. ಇವು ದೇಶದಲ್ಲಿ ವರದಿಯಾದ ಈ ತಳಿ ಸೋಂಕಿನ ಮೊದಲ ಪ್ರಕರಣಗಳಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಕೈರೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದ 26 ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರ ಪೈಕಿ ಮೂವರಲ್ಲಿ ಓಮೈಕ್ರಾನ್‌ ತಳಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

‘ಸೋಂಕಿತರ ಪೈಕಿ ಇಬ್ಬರಿಗೆ ಲಕ್ಷಣ ರಹಿತ ಕೋವಿಡ್‌ ಇದ್ದು, ಮತ್ತೊಬ್ಬ ವ್ಯಕ್ತಿಯಲ್ಲಿ ಸೌಮ್ಯಸ್ವರೂಪದ ಲಕ್ಷಣಗಳಿವೆ. ಮೂವರನ್ನು ಕೈರೊದ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ’ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

ಸೋಂಕು ದೃಢಪಟ್ಟಿರುವ ಪ್ರಯಾಣಿಕರು ಯಾವ ದೇಶಗಳಿಂದ ಬಂದಿದ್ದಾರೆ ಎಂಬ ಕುರಿತು ಸಚಿವಾಲಯ ಮಾಹಿತಿ ನೀಡಿಲ್ಲ. ಆದರೆ, ಈ ಮೂವರು ಪ್ರಯಾಣಿಕರು ದಕ್ಷಿಣ ಆಫ್ರಿಕಾದಿಂದ ಬಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.