ಲಾಹೋರ್ (ಪಿಟಿಐ): ‘ಭಾರತದಲ್ಲಿ ಉದ್ಯಮಿಗಳನ್ನು ಬೆಂಬಲಿಸುತ್ತಿರುವುದರಿಂದಲೇ ಆ ದೇಶದ ಪ್ರಗತಿ ಸಾಧ್ಯವಾಗಿದೆ. ಆದರೆ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಕಳ್ಳರಂತೆ ಕಾಣಲಾಗುತ್ತಿದೆ’ ಎಂದು ಪಾಕಿಸ್ತಾನದ ಗೃಹ ಸಚಿವ ಮೊಹಸಿನ್ ನಖ್ವಿ ಬೇಸರ ವ್ಯಕ್ತಪಡಿಸಿದ್ದಾರೆ. ‘ಉದ್ಯಮಿಗಳನ್ನು ಪ್ರೋತ್ಸಾಹಿಸುವ ಜೊತೆಗೆ ಸೂಕ್ತವಾಗಿ ಗೌರವಿಸುತ್ತಿರುವುದರಿಂದಲೇ ಭಾರತವು ಪ್ರಗತಿ ಹೊಂದಿದೆ. ಆದರೆ ಪಾಕಿಸ್ತಾನದ ಸ್ಥಿತಿಯೇ ಭಿನ್ನ. ಇಲ್ಲಿ ಸ್ವಲ್ಪ ಅಭಿವೃದ್ಧಿ ಹೊಂದುತ್ತಿದ್ದಂತೆ ಕಳ್ಳರ ಹಣೆಪಟ್ಟಿ ಅಂಟಿಸಲಾಗುತ್ತಿದೆ’ ಎಂದು ಗುರುವಾರ ಪತ್ರಕರ್ತರಿಗೆ ತಿಳಿಸಿದರು.
‘ಉದ್ಯಮಿಯಾಗಿ ನನ್ನ ಹಣವನ್ನು ನನ್ನಿಷ್ಟದ ಜಾಗದಲ್ಲಿ ಹೂಡಿಕೆ ಮಾಡುವೆ. ನನ್ನ ಪತ್ನಿಗೆ ಲಂಡನ್‌ನಲ್ಲೂ ಆಸ್ತಿಯಿದೆ. ಆಕೆಯ ವಿದೇಶದಲ್ಲಿನ ಆಸ್ತಿಗೆ ತೆರಿಗೆಯನ್ನು ಪಾವತಿಸಲಾಗಿದೆ. ವಿದೇಶದಲ್ಲಿ ಹೂಡಿಕೆ ಮಾಡುವುದರಲ್ಲಿ ಯಾವುದೇ ಅಕ್ರಮ ಇಲ್ಲ. ಫೆಡರಲ್ ತನಿಖಾ ಸಂಸ್ಥೆಯು (ಎಫ್‌ಐಎ) ಅಕ್ರಮವಾಗಿ ಕಡಲಾಚೆ ಆಸ್ತಿ ಹೊಂದಿರುವವರ ಬಗ್ಗೆ ತನಿಖೆ ನಡೆಸಬೇಕು. ಅನೇಕ ಮಾಧ್ಯಮ ಸಂಸ್ಥೆಗಳು ದುಬೈನಲ್ಲಿ ಆಸ್ತಿ ಹೊಂದಿವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.