ADVERTISEMENT

ಮಂಗಳಯಾನ ಕೈಬಿಟ್ಟ ಯುರೋಪ್‌

ಏಜೆನ್ಸೀಸ್
Published 17 ಮಾರ್ಚ್ 2022, 21:48 IST
Last Updated 17 ಮಾರ್ಚ್ 2022, 21:48 IST

ಪ್ಯಾರಿಸ್: ಮಂಗಳ ಗ್ರಹ ಮನುಷ್ಯನ ವಾಸಕ್ಕೆ ಯೋಗ್ಯವಾಗಿದೆಯೇ ಎನ್ನುವುದನ್ನು ಶೋಧಿಸಲು ರಷ್ಯಾದ ಬಾಹ್ಯಾಕಾಶ ಸಂಸ್ಥೆ (ರೋಸ್ಕೋಸ್ಮೊಸ್‌) ಸಹಯೋಗದಲ್ಲಿ ಕೈಗೊಳ್ಳಬೇಕಿದ್ದ ಮೊದಲ ಮಂಗಳಯಾನ ಯೋಜನೆಯನ್ನು ಕೈಬಿಟ್ಟಿರುವುದಾಗಿ ಯುರೋಪ್‌ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಹೇಳಿದೆ.

‘ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣ ವಿರೋಧಿಸಿ ಯುರೋಪ್ ತನ್ನ ಮೊದಲ ರೋವರ್ ಅನ್ನು ಮಂಗಳ ಗ್ರಹಕ್ಕೆ ಕಳುಹಿಸಲು ಇನ್ನು ಮುಂದೆ ಯಾವತ್ತಿಗೂ ಪ್ರಯತ್ನಿಸುವುದಿಲ್ಲ. ‘ಎಕ್ಸೋಮಾರ್ಸ್ ರೋವರ್ ಮಿಷನ್’ ಅನ್ನು ಸ್ಥಗಿತಗೊಳಿಸಲಾಗುತ್ತಿದೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT