ಸಾಂದರ್ಭಿಕ ಚಿತ್ರ
ಫ್ರಾಂಕ್‌ಫರ್ಟ್: ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆಗೊಳಿಸಲು ನೋವೊ ನಾರ್ಡಿಸ್ಕ್ ಕಂಪನಿಯ ‘ವೆಗೋವಿ’ ಔಷಧ ಬಳಕೆಗೆ ಯುರೋಪಿಯನ್ ಒಕ್ಕೂಟದ ಔಷಧ ನಿಯಂತ್ರಕವು ಈ ವಾರ ಅನುಮತಿ ನೀಡುವ ಸಾಧ್ಯತೆ ಇದೆ.
ನೋವೊ ನಾರ್ಡಿಸ್ಕ್ ಡ್ಯಾನಿಷ್ ಕಂಪನಿಯಾಗಿದ್ದು, ಅದರ ‘ವೆಗೋವಿ’ ಅನ್ನು ತೂಕ ಇಳಿಸುವ ಔಷಧವಾಗಿ ಬಳಸಲಾಗುತ್ತಿದೆ. ಕಂಪನಿಯ ಈ ಔಷಧವಷ್ಟೇ ಅಲ್ಲದೆ ಮಧುಮೇಹ ಔಷಧ ‘ಒಜೆಂಪಿಕ್’ಗೆ ಹೆಚ್ಚಿನ ಬೇಡಿಕೆಯಿದ್ದು, ಇವುಗಳಿಂದ ಕಳೆದ ಎರಡು ವರ್ಷಗಳಲ್ಲಿ ಕಂಪನಿಯ ಷೇರು ಮೌಲ್ಯ ದ್ವಿಗುಣಗೊಂಡಿದೆ.
ಸ್ಥೂಲಕಾಯ ಹೊಂದಿರುವ ರೋಗಿಗಳ ತೂಕವನ್ನು ಶೇ 15ರಷ್ಟು ಇಳಿಸಲು ‘ವೆಗೋವಿ’ ನೆರವಾಗುತ್ತಿದೆ. ಅಲ್ಲದೆ ಅದು ಹೃದಯಾಘಾತ, ಪಾರ್ಶ್ವವಾಯು ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಆಗುವ ಸಾವಿನ ಸಂಭವವನ್ನು ಶೇ 20ರಷ್ಟು ಕಡಿಮೆಗೊಳಿಸುತ್ತದೆ ಎಂಬುದು ಪ್ರಯೋಗಗಳಿಂದ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.