ADVERTISEMENT

ಟರ್ಕಿ– ಇಸ್ತಾಂಬುಲ್‌ನ ಪಾದಚಾರಿ ಮಾರ್ಗದಲ್ಲಿ ಸ್ಫೋಟ: 4 ಸಾವು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 15:53 IST
Last Updated 13 ನವೆಂಬರ್ 2022, 15:53 IST
ಇಸ್ತಾನ್‌ಬುಲ್‌ನ ಜನಪ್ರಿಯ ಪಾದಚಾರಿ ಮಾರ್ಗವಾದ ಅಸ್ತಿಕಲ್ ರಸ್ತೆಯಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಉಪಚರಿಸುತ್ತಿರುವ ಸ್ಥಳಿಯರು. – ಐಎಹೆಚ್‌ ಚಿತ್ರ
ಇಸ್ತಾನ್‌ಬುಲ್‌ನ ಜನಪ್ರಿಯ ಪಾದಚಾರಿ ಮಾರ್ಗವಾದ ಅಸ್ತಿಕಲ್ ರಸ್ತೆಯಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಉಪಚರಿಸುತ್ತಿರುವ ಸ್ಥಳಿಯರು. – ಐಎಹೆಚ್‌ ಚಿತ್ರ   

ಇಸ್ತಾಂಬುಲ್‌ (ಎಪಿ): ಇಸ್ತಾಂಬುಲ್‌ನ ಜನಪ್ರಿಯ ಪಾದಚಾರಿ ಮಾರ್ಗವಾದ ಇಸ್ತಿಕಾಲ್‌ ಅವೆನ್ಯೂದಲ್ಲಿ ಭಾನುವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ 4 ಜನ ಮೃತರಾಗಿದ್ದು, 38 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ತಾಂಬುಲ್‌ ಗವ‌ರ್ನರ್ ಅಲಿ ಯರ್ಲಿಕಾಯಾ ಟ್ವೀಟ್‌ ‌ಮಾಡಿದ್ದಾರೆ.

ಇಸ್ತಿಕಾಲ್ ಅವೆನ್ಯೂದಲ್ಲಿ ರೆಸ್ಟೋರೆಂಟ್‌, ಅಂಗಡಿಗಳಿದೆ. ಇದು ಹೆಚ್ಚಿನ ಪ್ರವಾಸಿಗರು, ಸ್ಥಳೀಯರಿಂದ ಕಿಕ್ಕಿರಿದ ರಸ್ತೆಯಾಗಿದೆ. ಭಾನುವಾರ ಸಂಜೆ ಸುಮಾರು 4.30ಕ್ಕೆ ಸ್ಫೋಟ ನಡೆದಿದ್ದು, ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ.

ಟರ್ಕಿಯ ಮಾಧ್ಯಮದಲ್ಲಿ ಸ್ಫೋಟದ ವರದಿ ಪ್ರಸಾರದ ಮೇಲೆ ತಾತ್ಕಾಲಿಕ ನಿಷೇಧಿ ವಿಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ಫೋಟದ ನಂತರದ ಹಾಗೂ ರಕ್ಷಣಾ ಕಾರ್ಯದ ವಿಡಿಯೊ ತುಣುಕುಗಳು ಹರಿದಾಡಿವೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.