ADVERTISEMENT

ಲಾಕ್‌ಡೌನ್‌ ತೆರವು | 'ತೀವ್ರ ನಿಗಾ' ವಹಿಸುವ ಅಗತ್ಯ‌–ವಿಶ್ವ ಆರೋಗ್ಯ ಸಂಸ್ಥೆ

ರಾಯಿಟರ್ಸ್
Published 12 ಮೇ 2020, 11:12 IST
Last Updated 12 ಮೇ 2020, 11:12 IST
ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ. ಟೆಡ್ರೋಸ್‌
ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ. ಟೆಡ್ರೋಸ್‌    

ವಿಶ್ವ ಆರೋಗ್ಯ ಸಂಸ್ಥೆ: ಲಾಕ್‌ಡೌನ್‌ ತೆರವುಗೊಳಿಸುವ ಎಲ್ಲಾ ದೇಶಗಳು 'ತೀವ್ರ ನಿಗಾ' ವಹಿಸುವ ಅಗತ್ಯ‌ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಜಾಗತಿಕವಾಗಿ ಕೊರೊನಾ ವೈರಸ್‌ ಎರಡನೇ ಹಂತದಲ್ಲಿ ಹರಡುವ ಕಳವಳದ ನಡುವೆಯೂಕೆಲವು ದೇಶಗಳು ಲಾಕ್‌ಡೌನ್‌ ಸಡಿಲಗೊಳಿಸುತ್ತಿವೆ. ಈ ಹಂತದಲ್ಲಿ ತುಂಬಾ ಜಾಗ್ರತೆ ವಹಿಸಬೇಕಾಗಿದೆ ಎಂದು ಆರೋಗ್ಯ ಸಂಸ್ಥೆಹೇಳಿದೆ.

ಲಾಕ್‌ಡೌನ್‌ ಸಡಿಲಗೊಳಿಸಲು ಜರ್ಮನಿ ಆರಂಭಿಕ ಕ್ರಮಗಳನ್ನು ತೆಗೆದುಕೊಂಡ ಸಂದರ್ಭದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿ ಕಂಡು ಬಂತು. ಹಾಗೇ ದಕ್ಷಿಣ ಕೋರಿಯಾ ಕೊರೊನಾ ವೈರಸ್‌ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಯಶಸ್ವಿಯಾದರೂ ರಾತ್ರಿ ಕ್ಲಬ್‌ಗಳ ಮೂಲಕ ಮತ್ತೆ ಸೋಂಕು ಹರಡಿರುವುದನ್ನುಗಮನಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಸೇವೆ ವಿಭಾಗದ ಅಧಿಕಾರಿ ಮೈಕ್‌ ರಿಯಾನ್‌ ಹೇಳಿದ್ದಾರೆ.

ADVERTISEMENT

ಕೋವಿಡ್‌–19 ಸೋಂಕಿನ ನಡುವೆಯೂ ವಿವಿಧ ದೇಶಗಳ ಸರ್ಕಾರಗಳು ಲಾಕ್‌ಡೌನ್‌ ತೆರವು ಮಾಡಿ ಆರ್ಥಿಕ ಪುನಶ್ಚೇತನಕ್ಕಾಗಿ ಹೆಣಗಾಡುತ್ತಿವೆ. ಅಪಾಯ ಎದುರಿಗಿದ್ದರೂಕುರುಡಾಗಿ ಮುಂದುವರೆಯುವುದು ಉತ್ತಮ ನಡೆಯಲ್ಲ ಎಂದು ರಿಯಾನ್‌ ಹೇಳಿದ್ದಾರೆ.

ಜರ್ಮನಿ ಮತ್ತು ದಕ್ಷಿಣ ಕೋರಿಯಾ ಹೆಚ್ಚು ಪರೀಕ್ಷೆಗಳ ಮೂಲಕ ಕೊರೊನಾ ತಡೆಯುವಲ್ಲಿ ಯಶಸ್ವಿಯಾಗಿದ್ದು ಎರಡನೇ ಹಂತದಲ್ಲಿ ಸೋಂಕು ಪಸರಿಸಿದರೂಯಶಸ್ವಿಯಾಗಿ ನಿಭಾಯಿಸಬಲ್ಲವು ಎಂದು ಅವರು ಹೇಳಿದ್ದಾರೆ.

ಲಸಿಕೆ ಕಂಡುಹಿಡಿಯುವ ವರೆಗೂ ಎಲ್ಲಾ ದೇಶಗಳು ವಿಶೇಷ ಜಾಗ್ರತೆವಹಿಸಿಸುವುದ ಅವಶ್ಯಕ ಹಾಗೂ ಸಾಮಾಜಿಕ ಅಂತರದ ಮೂಲಕ ಈ ವೈರಸ್‌ ಅನ್ನು ದೂರ ಇಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.