ADVERTISEMENT

ಕೋವಿಡ್ ಲಸಿಕೆ: ತಪ್ಪು ಮಾಹಿತಿ ಪ್ರಚಾರ ತಪ್ಪಿಸಲು ಫೇಸ್‌ಬುಕ್‌ ಹೊಸ ತಂತ್ರ

ಕೋವಿಡ್ ಲಸಿಕೆ ಕುರಿತ ಪೋಸ್ಟ್‌ಗಳಿಗೆ ‘ನಿಖರ ಮಾಹಿತಿಯ ಲೇಬಲ್‌ ಜೋಡಿಸುವುದು‘

ಏಜೆನ್ಸೀಸ್
Published 16 ಮಾರ್ಚ್ 2021, 5:44 IST
Last Updated 16 ಮಾರ್ಚ್ 2021, 5:44 IST
ಮಾರ್ಕ್ ಝುಕರ್‌ಬರ್ಗ್‌
ಮಾರ್ಕ್ ಝುಕರ್‌ಬರ್ಗ್‌   

ಲಂಡನ್: ‘ಕೋವಿಡ್‌ 19 ಲಸಿಕೆಗೆ ಸಂಬಂಧಿಸಿದಂತೆ ತನ್ನ ಒಡೆತನದ ವಿವಿಧ ಡಿಜಿಟಲ್ ವೇದಿಕೆ / ಸಾಮಾಜಿಕ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿಗಳು ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಫೇಸ್‌ಬುಕ್‌, ಕೋವಿಡ್‌ ಲಸಿಕೆ ಕುರಿತ ಪೋಸ್ಟ್‌ಗಳಿಗೆ – ವಿಶ್ವಾಸಾರ್ಹ ಮಾಹಿತಿಯುಳ್ಳ‌ ಪಟ್ಟಿಯನ್ನು ಸೇರಿಸಲು ಮುಂದಾಗಿದೆ.

ಈ ಕುರಿತು ಸೋಮವಾರ ಬ್ಲಾಗ್‌ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಫೇಸ್‌ಬುಕ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಾರ್ಕ್ ಜುಕರ್‌ ಬರ್ಗ್‌, ‘ಕೋವಿಡ್‌ ಲಸಿಕೆಗೆ ಸಂಬಂಧಿಸಿದ ಎಲ್ಲ ಪೋಸ್ಟ್‌ಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ನೀಡುವ ವಿಶ್ವಾಸಾರ್ಹ ಮಾಹಿತಿಯ ಪಟ್ಟಿಯನ್ನು ಲಗತ್ತಿಸಲಾಗಿರುತ್ತದೆ. ಈ ಮಾಹಿತಿ ಸದ್ಯ ಇಂಗ್ಲಿಷ್ ಮತ್ತು ಇತರ ಐದು ಭಾಷೆಗಳಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಭಾಷೆಗಳನ್ನು ಸೇರಿಸಲಾಗುತ್ತದೆ‘ ಎಂದು ಅವರು ಹೇಳಿದ್ದಾರೆ.

‌‘ಉದಾಹರಣೆಗೆ, ಕೋವಿಡ್‌ 19 ಲಸಿಕೆಗಳ ಸುರಕ್ಷತೆ ಕುರಿತು ಚರ್ಚಿಸುವ ಪೋಸ್ಟ್‌ಗಳಲ್ಲಿ ಲಗತ್ತಿಸಿರುವ ಮಾಹಿತಿಯ ಪಟ್ಟಿಯಲ್ಲಿ, ಕೋವಿಡ್‌ ಲಸಿಕೆಗಳನ್ನು ಅನುಮೋದಿಸುವ ಮೊದಲು, ಸುರಕ್ಷತೆ ಮತ್ತು ಪರಿಣಾಮಕಾರಿಯಾಗಿ ನಡೆದಿರುವ ಪರೀಕ್ಷೆಗಳ ಕುರಿತು ಮಾಹಿತಿ ಇರುತ್ತದೆ‘ ಎಂದು ಜುಕರ್‌ಬರ್ಗ್ ಹೇಳಿದ್ದಾರೆ.

ADVERTISEMENT

ಸಾಮಾಜಿಕ ಜಾಲ ತಾಣಗಳ ಬಳಕೆದಾರರು, ಲಸಿಕೆ ಪಡೆಯುವುದಕ್ಕೆ ನೆರವಾಗುವಂತಹ ಪರಿಕರವೊಂದನ್ನು ಜಾಲತಾಣಗಳಲ್ಲಿ ಸೇರಿಸಲಾಗಿದೆ. ಈ ಮೂಲಕ ಜಾಲತಾಣ ಬಳಕೆದಾರರಿಗೆ ಲಸಿಕೆ ಎಲ್ಲಿ ಸಿಗುತ್ತದೆ, ಹೇಗೆ ತೆಗೆದುಕೊಳ್ಳಬೇಕು ಎಂಬ ಮಾಹಿತಿ ನೀಡಲಾಗುತ್ತಿದೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸಾಮಾಜಿಕ ಜಾಲತಾಣಗಳು ಲಸಿಕೆ ವಿರೋಧಿ ಪ್ರಚಾರವನ್ನು ಟೀಕಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.