ADVERTISEMENT

27ನೇ ಬಾರಿಗೆ ಎವರೆಸ್ಟ್‌ ಏರಿದ ನೇಪಾಳಿ ಶೆರ್ಪಾ ಗೈಡ್ ಕಮಿ ರೀಟಾ

ಪಿಟಿಐ
Published 17 ಮೇ 2023, 13:51 IST
Last Updated 17 ಮೇ 2023, 13:51 IST
ಕಮಿ ರೀಟಾ
ಕಮಿ ರೀಟಾ   

ಕಠ್ಮಂಡು: ಪ್ರಸಿದ್ಧ ಪರ್ವತಾರೋಹಿ ಕಮಿ ರೀಟಾ ಶೆರ್ಪಾ ಅವರು 27ನೇ ಬಾರಿಗೆ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ ಏರುವ ಮೂಲಕ ಹಿಂದಿನ ತಮ್ಮದೇ ದಾಖಲೆಯನ್ನು ಸರಿಗಟ್ಟಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ರೀಟಾ ಅವರು ಬುಧವಾರ ಪರ್ವತದ ತುತ್ತತುದಿ 8,848.86 ಮೀಟರ್‌ ಎತ್ತರಕ್ಕೆ ತಲುಪಿದರು ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ರೀಟಾ ಅವರು 1994 ಮೇ 13ರಂದು ಮೊದಲ ಬಾರಿಗೆ ಎವರೆಸ್ಟ್‌ ಏರಿದ್ದರು. 2022ರಲ್ಲಿ 26ನೇ ಬಾರಿಗೆ ಪರ್ವತವನ್ನು ಏರುವ ಮೂಲಕ ಅತಿ ಹೆಚ್ಚು ಬಾರಿ ಎವರೆಸ್ಟ್‌ ಏರಿದ ಮೊದಲಿಗರು ಎಂಬ ದಾಖಲೆ ನಿರ್ಮಿಸಿದ್ದರು. ಇತ್ತೀಚೆಗೆ ಇವರ ಒಡನಾಡಿ ಪಸಂಗ್‌ ದವಾ ಶೆರ್ಪಾ ಸಹ 26ನೇ ಬಾರಿಗೆ ಎವರೆಸ್ಟ್‌ ತುತ್ತತುದಿ ತಲುಪಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.