ADVERTISEMENT

ಭಯೋತ್ಪಾದನೆ ನಿಗ್ರಹ: ಪಾಕ್‌ ಕಾರ್ಯಕ್ಷಮತೆ ಕಳಪೆ: ಎಪಿಎಫ್‌

ಪಿಟಿಐ
Published 13 ಸೆಪ್ಟೆಂಬರ್ 2022, 14:38 IST
Last Updated 13 ಸೆಪ್ಟೆಂಬರ್ 2022, 14:38 IST
ಎಫ್‌ಎಟಿಎಫ್‌
ಎಫ್‌ಎಟಿಎಫ್‌   

ಇಸ್ಲಾಮಾಬಾದ್‌ (ಪಿಟಿಐ): ಹಣ ಅಕ್ರಮ ವರ್ಗಾವಣೆ ತಡೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸುವುದಕ್ಕೆ ಕಡಿವಾಣ ಹಾಕುವ ವಿಚಾರದಲ್ಲಿ ಪಾಕಿಸ್ತಾನದ ಕಾರ್ಯಕ್ಷಮತೆ ತೀರಾ ಕಳಪೆಯಾಗಿರುವುದಾಗಿ ಫೈನಾನ್ಶಿಯಲ್‌ ಆ್ಯಕ್ಷನ್‌ ಟಾಸ್ಕ್‌ ಫೋರ್ಸ್‌ನ (ಎಫ್‌ಎಟಿಎಫ್‌) ಏಷ್ಯಾ ಪೆಸಿಫಿಕ್‌ ಸಮೂಹ (ಎಪಿಎಫ್‌) ಹೇಳಿದೆ ಎಂದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.

‘ತನ್ನ ಪ್ರಾದೇಶಿಕ ಸದಸ್ಯ ರಾಷ್ಟ್ರಗಳ ಗುರಿ ಸಾಧನೆಯ ಪರಿಷ್ಕೃತ ವರದಿಯನ್ನು ಎಪಿಎಫ್‌, ಸೆಪ್ಟೆಂಬರ್‌ 2ರಂದು ಬಿಡುಗಡೆ ಮಾಡಿದೆ. ಹಣ ಅಕ್ರಮ ವರ್ಗಾವಣೆ ತಡೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸುವುದಕ್ಕೆ ಕಡಿವಾಣ ಹಾಕಲು ನಿಗದಿ ಮಾಡಲಾಗಿದ್ದ 11 ಉಪಕ್ರಮಗಳ ಪೈಕಿ ಪಾಕಿಸ್ತಾನವು ಒಂದನ್ನಷ್ಟೇ ಪೂರೈಸಿರುವುದಾಗಿ ಅದರಲ್ಲಿ ಉಲ್ಲೇಖಿಸಲಾಗಿದೆ’ ಎಂದು ಡಾನ್‌ ಪತ್ರಿಕೆ ತಿಳಿಸಿದೆ.

‘ಪಾಕಿಸ್ತಾನವನ್ನು ಬೂದು ಪಟ್ಟಿಯಿಂದ ಹೊರಗಿಡುವ ಕುರಿತ ನಿರ್ಧಾರ ಪ್ರಕಟಿಸುವ ಮುನ್ನ, ಆ ರಾಷ್ಟ್ರವು 2018ರ ಜೂನ್‌ನಲ್ಲಿ ನಿಗದಿಮಾಡಲಾಗಿದ್ದ 34 ಅಂಶಗಳ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಎಫ್‌ಎಟಿಎಫ್‌ ಮತ್ತು ಎ‍ಪಿಜಿ ನಿರ್ಧರಿಸಿತ್ತು. ಇದಕ್ಕಾಗಿ 15 ಸದಸ್ಯರನ್ನೊಳಗೊಂಡ ಜಂಟಿ ನಿಯೋಗವು ಆಗಸ್ಟ್‌ 29ರಿಂದ ಸೆಪ್ಟೆಂಬರ್‌ 2ರವರೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು’ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.