ADVERTISEMENT

ಟ್ರಂಪ್‌ ವಿರುದ್ಧ ಮಾನನಷ್ಟ ಮೊಕದ್ದಮೆ ರದ್ದು

ಏಜೆನ್ಸೀಸ್
Published 16 ಅಕ್ಟೋಬರ್ 2018, 18:56 IST
Last Updated 16 ಅಕ್ಟೋಬರ್ 2018, 18:56 IST
   

ಲಾಸ್‌ ಏಂಜಲೀಸ್‌:ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌, ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಅಮೆರಿಕದ ಫೆಡರಲ್‌ ನ್ಯಾಯಾಧೀಶರು ಸೋಮವಾರ ರದ್ದುಗೊಳಿಸಿದ್ದಾರೆ.

ಈ ಮೂಲಕ ಸ್ಟಾರ್ಮಿ ಡೇನಿಯಲ್ಸ್‌ ವಿರುದ್ಧದ ಕಾನೂನು ಹೋರಾಟದಲ್ಲಿ ಟ್ರಂಪ್‌ಗೆ ಗೆಲುವು ದೊರಕಿದೆ.

2016ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಡೊನಾಲ್ಡ್‌ ಟ್ರಂಪ್‌ ಅವರುಸಂಬಂಧ ಬಹಿರಂಗಪಡಿಸದಂತೆ ನನ್ನ ಜೊತೆ ಗುಪ್ತ ಒಪ್ಪಂದ ಮಾಡಿಕೊಂಡು, ಇದಕ್ಕಾಗಿ ₹95.26 ಲಕ್ಷ (1.30 ಲಕ್ಷ ಡಾಲರ್‌) ಹಣ ನೀಡಿದ್ದರು ಎಂದು ಆರೋಪಿಸಿ ಸ್ಟಾರ್ಮಿ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.