ವೆಲ್ಲಿಂಗ್ಟನ್: ಪೆಸಿಫಿಕ್ ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟಿಸಿ ಟೊಂಗಾ ದ್ವೀಪದಫುಅಅಮೊಟೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ರನ್‌ವೇಯಲ್ಲಿ ತುಂಬಿದ್ದ ಬೂದಿಯನ್ನು ಗುರುವಾರ ತೆರವುಗೊಳಿಸಲಾಗಿದ್ದು, ನ್ಯೂಜಿಲೆಂಡ್ ಕಳುಹಿಸಿಕೊಟ್ಟ ಪರಿಹಾರ ಸಾಮಗ್ರಿ ಹೊತ್ತು ವಿಮಾನ ಅಲ್ಲಿ ಇಳಿದಿದೆ.
ಆಸ್ಟ್ರೇಲಿಯಾ ಸಹ ಪರಿಹಾರ ಸಾಮಗ್ರಿ ಹೊತ್ತ ವಿಮಾನ ಕಳುಹಿಸಿಕೊಟ್ಟಿದೆ. ನ್ಯೂಜಿಲೆಂಡ್ ಒಂದು ನೌಕಾಪಡೆ ಯುದ್ಧನೌಕೆಯನ್ನು ಸಹ ಟೊಂಗಾಗೆ ಕಳುಹಿಸಿಕೊಟ್ಟಿದೆ.
ಸುನಾಮಿಯಿಂದಾಗಿ ಟೊಂಗಾ ದ್ವೀಪದ 84 ಸಾವಿರಕ್ಕೂ ಅಧಿಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಹಾರ ಸಾಮಗ್ರಿಗಳ ಜತೆ ಕೋವಿಡ್ ಸೋಂಕು ಸಹ ದ್ವೀಪವನ್ನು ಪ್ರವೇಶಿಸದಂತೆ ನೋಡಿಕೊಳ್ಳಲು ಎಚ್ಚರ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.