ADVERTISEMENT

ಅಮೆರಿಕದ ಮೊದಲ ಸಿಖ್‌ ನ್ಯಾಯಾಧೀಶೆ ಮನ್‌ಪ್ರೀತ್‌

ಪಿಟಿಐ
Published 9 ಜನವರಿ 2023, 11:11 IST
Last Updated 9 ಜನವರಿ 2023, 11:11 IST
ಮನ್‌ಪ್ರೀತ್‌ ಮೋನಿಕಾ ಸಿಂಗ್‌ (ಫೇಸ್‌ಬುಕ್‌ ಚಿತ್ರ)
ಮನ್‌ಪ್ರೀತ್‌ ಮೋನಿಕಾ ಸಿಂಗ್‌ (ಫೇಸ್‌ಬುಕ್‌ ಚಿತ್ರ)   

ಹ್ಯೂಸ್ಟನ್‌: ಭಾರತೀಯ ಮೂಲದ ಮನ್‌ಪ್ರೀತ್‌ ಮೋನಿಕಾ ಸಿಂಗ್‌ ಅವರು ಹ್ಯಾರಿಸ್‌ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಅಮೆರಿಕದಲ್ಲಿ ಸಿಖ್‌ ಸಮುದಾಯಕ್ಕೆ ಸೇರಿದ ಮೊದಲ ನ್ಯಾಯಾಧೀಶೆ ಎಂಬ ಖ್ಯಾತಿಗೆ ಮನ್‌ಪ್ರೀತ್‌ ಪಾತ್ರರಾಗಿದ್ದಾರೆ.

ಮನ್‌ಪ್ರೀತ್‌ ಅವರ ತಂದೆ, ಭಾರತದಿಂದ 1970ರ ಸುಮಾರಿಗೆ ಅಮೆರಿಕಕ್ಕೆ ವಲಸೆ ಹೋಗಿದ್ದರು. ಮನ್‌ಪ್ರೀತ್‌ ಅವರು ಹ್ಯೂಸ್ಟನ್‌ನಲ್ಲಿಯೇ ಹುಟ್ಟಿ ಬೆಳೆದವರು. ಸದ್ಯ ಅವರು ಪತಿ, ಇಬ್ಬರು ಮಕ್ಕಳೊಂದಿಗೆ ಬಿಲೇರ್‌ನಲ್ಲಿ ವಾಸವಾಗಿದ್ದಾರೆ.

ಸ್ಥಳೀಯ ಹಂತದ ವಕೀಲೆಯಾಗಿ ಮನ್‌ಪ್ರೀತ್‌ ಅವರು 20 ವರ್ಷ ಸೇವೆ ಸಲ್ಲಿಸಿದ್ದಾರೆ. ಜೊತೆಗೆ, ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಗರಿಕ ಹಕ್ಕುಗಳ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

ADVERTISEMENT

ಭಾರತ ಮೂಲದ ನ್ಯಾಯಾಧೀಶ ರವಿ ಸಂದಿಲ್‌ ಅವರು ನ್ಯಾಯಾಲಯದಲ್ಲಿ ನಡೆದ ಮನ್‌ಪ್ರೀತ್‌ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.