ತೈಪೆ: ತೈವಾನ್‌ನಲ್ಲಿ ಮೊದಲ ಅಧಿಕೃತ ಸಲಿಂಗ ವಿವಾಹ ಶುಕ್ರವಾರ ನೆರವೇರಿತು.
ಪುರುಷ ಸಲಿಂಗ ಜೋಡಿಗಳಾದ ಶೇನ್ ಲಿನ್ ಮತ್ತು ಮಾರ್ಕ್ ಯುವಾನ್ ಮದುವೆಯಾದರು. ಈ ಮೂಲಕ ಏಷ್ಯಾದಲ್ಲಿ ಲೈಂಗಿಕ ಅಲ್ಪಸಂಖ್ಯಾತರು (ಎಲ್‌ಜಿಬಿಟಿ) ನಡೆಸುತ್ತಿದ್ದ ಮೂರು ದಶಕಗಳ ಹೋರಾಟಕ್ಕೆ ಜಯ ಸಂದಿದೆ.
ಕಾಲೇಜು ದಿನಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದ ಶೇನ್ ಲಿನ್ ಮತ್ತು ಮಾರ್ಕ್ ಯೋನ್ ಅವರುಇಲ್ಲಿನ ಸರ್ಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದಾರೆ.
ಕಳೆದ ವಾರ ತೈವಾನ್, ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿತ್ತು. ಇಂತಹ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದ ಏಷ್ಯಾದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಸಲಿಂಗ ವಿವಾಹಕ್ಕೆ ಅವಕಾಶ ನೀಡುವ ಮಸೂದೆಯ ಪರ ಹಾಗೂ ವಿರೋಧ ಹೋರಾಟಗಳು ಇಲ್ಲಿ ನಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.