ADVERTISEMENT

ಸೌರಜ್ವಾಲೆಗಿಂತ ಸಾವಿರ ಕೋಟಿ ಹೆಚ್ಚು ಶಕ್ತಿಶಾಲಿ ಜ್ವಾಲೆ ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 18:40 IST
Last Updated 13 ಫೆಬ್ರುವರಿ 2019, 18:40 IST
solar flare
solar flare   

ವಾಷಿಂಗ್ಟನ್ (ಪಿಟಿಐ): ಸೂರ್ಯನ ಮೇಲ್ಮೈನಿಂದ ಹೊಮ್ಮುವ ಸೌರಜ್ವಾಲೆಗಿಂತ ಸಾವಿರ ಕೋಟಿ ಹೆಚ್ಚು ಶಕ್ತಿಶಾಲಿಯಾದ ಜ್ವಾಲೆಯನ್ನು ಪತ್ತೆ ಮಾಡಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹುವಾಯಿಯಲ್ಲಿಜೇಮ್ಸ್ ಕ್ಲರ್ಕ್ ಮ್ಯಾಕ್ಸ್‌ವೆಲ್ ದೂರದರ್ಶಕ (ಜೆಸಿಎಂಟಿ) ಬಳಸಿ, ಜೆಸಿಎಂಟಿ ಸಮೀಕ್ಷಾ ತಂಡದ ವಿಜ್ಞಾನಿಗಳುನಕ್ಷತ್ರಗಳ ಹುಟ್ಟು ಅಧ್ಯಯನ ಮಾಡುವ ವೇಳೆ ಈ ವಿಷಯ ಪತ್ತೆಯಾಗಿದೆ.

ಇದರಿಂದ ಸೌರಮಂಡಲದ ಹುಟ್ಟು ಮತ್ತು ಬೆಳವಣಿಗೆಯ ರಹಸ್ಯಗಳನ್ನು ಪತ್ತೆ ಮಾಡಲು ಸಾಧ್ಯವಾಗಬಹುದು ಎನ್ನುವ ನಿರೀಕ್ಷೆ ಇದೆ.

ADVERTISEMENT

‘ತೀವ್ರವಾದ ಆಯಸ್ಕಾಂತೀಯ ವಲಯದಲ್ಲಿ ಉಂಟಾದ ಚಟುವಟಿಕೆಗಳಿಂದ ಉತ್ಪಾದನೆಯಾದ ಈ ಜ್ವಾಲೆಯಿಂದ, ಹೊಸದಾಗಿ ಸೃಷ್ಟಿಯಾಗುತ್ತಿರುವ ನಕ್ಷತ್ರಗಳಿಗೆ ದ್ರವ್ಯ ರವಾನೆಯಾಗುತ್ತಿತ್ತು. ಭೂಮಿಗೆ ಸಮೀಪದಲ್ಲಿ,ಕ್ಷೀರಪಥದ ಹೊರಗಿರುವ ನಕ್ಷತ್ರಗಳ ಸಮೂಹದಲ್ಲಿ ಈ ಕ್ರಿಯೆ ಉಂಟಾಗಿದ್ದು, ಕೆಲವೇ ತಾಸುಗಳು ಮಾತ್ರ ಇದು ಸಂಭವಿಸಿತ್ತು’ ಎಂದು ತಂಡದ ವಿಜ್ಞಾನಿಗಳು ಹೇಳಿದ್ದಾರೆ.

‘ಈ ರೀತಿಯ ಘಟನೆ ನಡೆದಿರುವುದು ಬಹುಶಃ ಹುವಾಯಿಯಲ್ಲಿ ಮಾತ್ರ. ಬಾಹ್ಯಾಕಾಶ, ಕಾಲ ಹಾಗೂ ಸೃಷ್ಟಿಯ ಕುರಿತು ಎಂದಿನಿಂದಲೂನ ಇರುವ ಪ್ರಶ್ನೆಗಳಿಗೆ ಈ ಮೂಲಕ ಉತ್ತರ ದೊರಕಬಹುದು’ ಎಂದು ತಂಡದ ಭೌತವಿಜ್ಞಾನಿ ಸ್ಟೀವ್ ಮೆರ್ಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.