ADVERTISEMENT

ನೇಪಾಳ ಪ್ರವಾಹ: 382 ಮನೆಗಳು ಜಲಾವೃತ

ಪಿಟಿಐ
Published 6 ಸೆಪ್ಟೆಂಬರ್ 2021, 7:54 IST
Last Updated 6 ಸೆಪ್ಟೆಂಬರ್ 2021, 7:54 IST
ಕಠ್ಮಂಡುನ ಸಿಂಧೂಪಾಲ್‌ಚೋಕ್‌ನಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ ಜಲಾವೃತಗೊಂಡ ಮನೆಗಳು                        –ಎಎಫ್‌ಪಿ ಚಿತ್ರ
ಕಠ್ಮಂಡುನ ಸಿಂಧೂಪಾಲ್‌ಚೋಕ್‌ನಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ ಜಲಾವೃತಗೊಂಡ ಮನೆಗಳು                        –ಎಎಫ್‌ಪಿ ಚಿತ್ರ   

ಕಠ್ಮಂಡು: ‘ನೇಪಾಳದ ಕಠ್ಮಂಡುವಿನಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ 382 ಮನೆಗಳು ಜಲಾವೃತಗೊಂಡಿದ್ದು, ಹಲವು ವಸತಿ ಪ್ರದೇಶಗಳು ಹಾನಿಗೊಳಗಾಗಿವೆ’ ಎಂದು ಪೊಲೀಸರು ಸೋಮವಾರ ತಿಳಿಸಿದರು.

‘ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ 100ಕ್ಕೂ ಹೆಚ್ಚು ಪ್ರದೇಶಗಳು ಜಲಾವೃತವಾಗಿವೆ. ಕಳೆದ ರಾತ್ರಿ ನೇಪಾಳ ಪೊಲೀಸ್‌ ಪಡೆ, ಶಸ್ತ್ರಾಸ್ತ್ರ ಪೊಲೀಸ್‌ ಪಡೆ, ನೇಪಾಳ ಸೇನೆಯು 138 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ’ ಎಂದು ಮೆಟ್ರೊಪಾಲಿಟನ್‌ ಪೊಲೀಸ್‌ ಕಚೇರಿಯ ವಕ್ತಾರ ಸುಶೀಲ್‌ ಸಿಂಗ್ ರಾಥೋರ್‌ ಅವರು ಹೇಳಿದರು.

ಕಠ್ಮಂಡುವಿನಲ್ಲಿ ನಾಲ್ಕು ಗಂಟೆಗಳಲ್ಲಿ 105 ಮಿ.ಮೀ ಮಳೆಯಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.