ADVERTISEMENT

ಮೊಸಳೆ ಬಾಲದ ಮೇಲಿದ್ದ ಚೆಂಡನ್ನು ತೆಗೆದ ಫ್ಲಾರಿಡಾ ನಿವಾಸಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 10:22 IST
Last Updated 16 ಡಿಸೆಂಬರ್ 2020, 10:22 IST
ಕೈಲ್ ಡೌನ್ಸ್ ಪೋಸ್ಟ್ ಮಾಡಿರುವ ವಿಡಿಯೋದಿಂದ ತೆಗೆದ ಸ್ಕ್ರೀನ್ ಪ್ರಿಂಟ್
ಕೈಲ್ ಡೌನ್ಸ್ ಪೋಸ್ಟ್ ಮಾಡಿರುವ ವಿಡಿಯೋದಿಂದ ತೆಗೆದ ಸ್ಕ್ರೀನ್ ಪ್ರಿಂಟ್    

ಫ್ಲಾರಿಡಾ: ನಮ್ಮಲ್ಲಿ ಬಹುತೇಕರು ಮೊಸಳೆ ಕಂಡ ಕೂಡಲೇ ಮಾರು ದೂರ ಓಡುತ್ತೇವೆ. ಅದರ ಸಮೀಪಕ್ಕೂ ಸುಳಿಯುವ ಪ್ರಯತ್ನ ಮಾಡುವುದಿಲ್ಲ. ಆದರೆ, ಇಲ್ಲೊಬ್ಬ ವ್ಯಕ್ತಿ ಮೊಸಳೆ ಬಾಲದ ಮೇಲಿದ್ದ ಗಾಲ್ಫ್ ಚೆಂಡನ್ನು ನಿರಾಯಾಸವಾಗಿ ಎತ್ತಿಕೊಂಡಿದ್ದಾನೆ. ಈ ಮೈಜುಮ್ಮೆನ್ನಿಸುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುದ್ದಿ ಜಾಲತಾಣ ಯುಪಿಐ ವರದಿ ಪ್ರಕಾರ, ಕೈಲ್ ಡೌನ್ಸ್ ಮತ್ತು ಆತನ ಸಹೋದರರು ಫ್ಲಾರಿಡಾದ ಕೇಪ್ ಕೊರಲ್‌ನ ಓಕ್ಸ್ ಗಾಲ್ಫ್ ಕೋರ್ಸ್‌ನಲ್ಲಿ ಗಾಲ್ಫ್ ಆಡುತ್ತಿದ್ದರು. ಈ ಸಂದರ್ಭ ಗಾಲ್ಫ್ ಚೆಂಡು ಮೊಸಳೆಯ ಬಾಲದ ಮೇಲೆ ಬಿದ್ದಿತು. ಈ ಸಂದರ್ಭ, ಬಿಸಿಲು ಕಾಯಿಸಿಕೊಳ್ಳುತ್ತಿದ್ದ ಮೊಸಳೆ ಬಳಿಗೆ ಒಂದೊಂದೇ ಹೆಜ್ಜೆ ಇಡುತ್ತ ನಿಧಾನವಾಗಿ ತೆರಳಿದ ಕೈಲ್ ಡೌನ್ಸ್ ಸಹೋದರ, ಸರಿಸೃಪದ ಬಾಲದಿಂದ ಸ್ವಲ್ಪವೂ ಅಲುಗಾಡದಂತೆ ಚೆಂಡನ್ನು ಹೊರತೆಗೆದು ವೇಗವಾಗಿ ವಾಪಸ್ ಬಂದುಬಿಡುತ್ತಾನೆ.

ಚೆಂಡನ್ನು ತೆಗೆದ ಕೂಡಲೇ ಮೊಸಳೆ ಗಾಬರಿಯಿಂದ ನೀರಿಗೆ ಜಾರುತ್ತದೆ. ಕೈಲ್ ಡೌನ್ಸ್ ಈ ವಿಡಿಯೋವನ್ನು ಫೇಸ್ಬುಕ್‌ಗೆ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.