ADVERTISEMENT

ಎಫ್‌ಎಸ್‌ಬಿ ಅಧ್ಯಕ್ಷ ನಾಟ್‌ ಭೇಟಿ ಮಾಡಿದ ಹಣಕಾಸು ಸಚಿವೆ ನಿರ್ಮಲಾ

ಪಿಟಿಐ
Published 20 ಏಪ್ರಿಲ್ 2022, 11:31 IST
Last Updated 20 ಏಪ್ರಿಲ್ 2022, 11:31 IST
ನಿರ್ಮಲಾ ಸೀತಾರಾಮನ್ 
ನಿರ್ಮಲಾ ಸೀತಾರಾಮನ್    

ವಾಷಿಂಗ್ಟನ್‌: ಹಣಕಾಸು ಸ್ಥಿರತೆ ಮಂಡಳಿ ಅಧ್ಯಕ್ಷ ಕ್ಲಾಸ್‌ ನಾಟ್‌ ಮತ್ತು ಕ್ಲೈಮೇಟ್‌ ಫೈನಾನ್ಸ್‌ ಲೀಡರ್‌ಶಿಪ್‌ ಇನಿಶಿಯೇಟಿವ್‌ (ಸಿಎಫ್‌ಎಲ್‌ಐ) ಉಪಾಧ್ಯಕ್ಷೆ ಮೇರಿ ಶಾಪಿರೋ ಅವರನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಲ್ಲಿ ಭೇಟಿಯಾದರು.

ಈ ವೇಳೆ ಅವರು ಕ್ರಿಪ್ಟೊ ವ್ಯವಸ್ಥೆಯಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಭಾರತದ ಮೊದಲ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬರುವ ಗಿಫ್ಟ್‌ ನಗರದ ಅಭಿವೃದ್ಧಿ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮತ್ತು ವಿಶ್ವ ಬ್ಯಾಂಕ್‌ ಮಂಗಳವಾರ ವಾಷಿಂಗ್ಟನ್‌ನಲ್ಲಿ ಆಯೋಜಿಸಿದ್ದ ಸಭೆ ಹಿನ್ನೆಲೆ ಸೀತಾರಾಮನ್‌ ಸೋಮವಾರ ಇಲ್ಲಿಗೆ ಆಗಮಿಸಿದ್ದರು. ಸಭೆಯ ವೇಳೆ ಐಎಂಎಫ್‌ನ ಮುಖ್ಯಸ್ಥೆ ಕ್ರಿಸ್ಟಾಲಿನಾಜಾರ್ಜಿವಾ ಅವರ ಜೊತೆ ಮಾತುಕತೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.