ADVERTISEMENT

ಭಾರತ-ಥಾಯ್ಲೆಂಡ್ ಕಾರ್ಯತಂತ್ರದ ಪಾಲುದಾರಿಕೆ ಗಟ್ಟಿಗೊಳಿಸಲು ಮಾತುಕತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಏಪ್ರಿಲ್ 2025, 12:43 IST
Last Updated 3 ಏಪ್ರಿಲ್ 2025, 12:43 IST
<div class="paragraphs"><p>ನರೇಂದ್ರ ಮೋದಿ,&nbsp;ಪೆಟೊಂತಾರ್ನ್‌ ಶಿನೊವಾರ್ಥ್‌</p></div>

ನರೇಂದ್ರ ಮೋದಿ, ಪೆಟೊಂತಾರ್ನ್‌ ಶಿನೊವಾರ್ಥ್‌

   

(ಚಿತ್ರ ಕೃಪೆ: X/@narendramodi)

ಬ್ಯಾಂಕಾಕ್: ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಥಾಯ್ಲೆಂಡ್‌ನ ಪ್ರಧಾನಿ ಪೆಟೊಂತಾರ್ನ್‌ ಶಿನೊವಾರ್ಥ್‌ ಅವರೊಂದಿಗೆ ಇಂದು (ಗುರುವಾರ) ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ADVERTISEMENT

ಈ ಕುರಿತು ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

'ಭಾರತ ಹಾಗೂ ಥಾಯ್ಲೆಂಡ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಗಮನ ಕೇಂದ್ರೀಕರಿಸಿದ್ದೇವೆ. ರಕ್ಷಣೆ, ಭದ್ರತೆ, ಕಡಲ ಭದ್ರತೆ, ಜಲವಿಜ್ಞಾನದಂತಹ ಕಾರ್ಯತಂತ್ರದ ಕ್ಷೇತ್ರಗಳ ಕುರಿತಾಗಿಯೂ ಚರ್ಚಿಸಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

'ಭಯೋತ್ಪಾದನೆ, ಹಣ ಅಕ್ರಮ ವರ್ಗಾವಣೆ ಮತ್ತು ಇತರೆ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಕೆಲಸ ಮಾಡಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

'ಆರ್ಥಿಕ ಮತ್ತು ವ್ಯಾಪಾರ ಬಾಂಧವ್ಯವನ್ನು ಹೆಚ್ಚಿಸಲು ಭಾರತ ಹಾಗೂ ಥಾಯ್ಲೆಂಡ್ ಉತ್ಸುಕವಾಗಿದೆ. ಕೃಷಿ, ಎಂಎಸ್‌ಎಂಇ, ನೌಕಾಯಾನ, ಫಿನ್‌ಟೆಕ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ನಿಕಟವಾಗಿ ಕೆಲಸ ಮಾಡಲು ಚರ್ಚಿಸಿದ್ದೇವೆ. ಸಾಂಸ್ಕೃತಿಕ ಬಾಂಧವ್ಯವು ಪ್ರಮುಖವಾಗಿ ಎದ್ದು ಕಾಣಿಸಿತು' ಎಂದು ಅವರು ಉಲ್ಲೇಖಿಸಿದ್ದಾರೆ.

ಎರಡು ದಿನಗಳ ಥಾಯ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, 6ನೇ 'ಬಂಗಾಳ ಕೊಲ್ಲಿ ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಸಂಘಟನೆ' (ಬಿಐಎಂಎಸ್‌ಟಿಇಸಿ) ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.