ADVERTISEMENT

ವಿದೇಶಗಳಿಂದ ದೇಣಿಗೆ ಸ್ವೀಕಾರ: ಇಮ್ರಾನ್‌ ಖಾನ್‌ ಪಕ್ಷಕ್ಕೆ ಶೋಕಾಸ್‌ ನೋಟಿಸ್‌

ಪಿಟಿಐ
Published 2 ಆಗಸ್ಟ್ 2022, 11:28 IST
Last Updated 2 ಆಗಸ್ಟ್ 2022, 11:28 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ಇಸ್ಲಾಮಾಬಾದ್‌: ವಿದೇಶಗಳಿಂದ ಅಕ್ರಮವಾಗಿ ದೇಣಿಗೆ ಸ್ವೀಕರಿಸಿರುವ ಸಂಬಂಧ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್‌ (ಪಿಟಿಐ) ಪಕ್ಷಕ್ಕೆ ಪಾಕಿಸ್ತಾನ ಚುನಾವಣಾ ಆಯೋಗ (ಇಸಿಪಿ) ಮಂಗಳವಾರ ಶೋಕಾಸ್‌ ನೋಟಿಸ್‌ ನೀಡಿದೆ.

ಮುಖ್ಯ ಚುನಾವಣಾ ಆಯುಕ್ತ ಸಿಕಂದರ್‌ ಸುಲ್ತಾನ್‌ ರಾಜಾ, ನಿಸಾರ್‌ ಅಹ್ಮದ್‌ ದುರಾನಿ ಮತ್ತು ಶಾ ಮಹಮ್ಮದ್‌ ಜತೋಗಿ ಅವರನ್ನೊಳಗೊಂಡ ಇಸಿಪಿ ಪೀಠವು, ಪಿಟಿಐ ಪಕ್ಷ ಒಟ್ಟು 34 ರಾಷ್ಟ್ರಗಳಿಂದ ಅಕ್ರಮವಾಗಿ ದೇಣಿಗೆ ಸ್ವೀಕರಿಸಿದೆ ಎಂದು ತೀರ್ಪು ನೀಡಿದೆ.

‘ಇಮ್ರಾನ್‌ ಅವರ ಪಕ್ಷವು 13 ಬ್ಯಾಂಕ್‌ ಖಾತೆಗಳನ್ನು ರಹಸ್ಯವಾಗಿ ಇಟ್ಟಿತ್ತು. ಆ ಮೂಲಕ ಪಾಕಿಸ್ತಾನದ ಸಂವಿಧಾನದ ನಿಯಮಾವಳಿಗಳನ್ನು ಗಾಳಿಗೆ ತೂರಿದೆ. ಅವರು ಸ್ವೀಕರಿಸಿರುವ ದೇಣಿಗೆ ಮೊತ್ತವನ್ನುನಾವೇಕೆ ಜಪ್ತಿ ಮಾಡಬಾರದು ಎಂಬುದಕ್ಕೆ ಪಕ್ಷ ಸಕಾರಣ ನೀಡಬೇಕು’ ಎಂದು ಸೂಚಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.