ಕಾಬೂಲ್: ಕಳೆದ 20 ದಿನಗಳಿಂದ ಅಫ್ಗಾನಿಸ್ತಾನದ 15 ಪ್ರಾಂತ್ಯಗಳಲ್ಲಿ ಭಾರೀ ಹಿಮಪಾತದಿಂದಾಗಿ ಕನಿಷ್ಠ 42 ಜನರು ಸಾವನ್ನಪ್ಪಿದ್ದಾರೆ ಮತ್ತು 118 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, 2,000ಕ್ಕೂ ಹೆಚ್ಚು ಮನೆಗಳು ಸಹ ನಾಶವಾಗಿವೆ ಎಂದು ವಿಪತ್ತು ನಿರ್ವಹಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತ ಜನರಿಗೆ ತುರ್ತು ನೆರವು ನೀಡಲಾಗುತ್ತಿದೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.
ಭಾರೀ ಹಿಮಪಾತದಿಂದಾಗಿ ಹಲವಾರು ಹೆದ್ದಾರಿಗಳಲ್ಲಿ ಸಿಲುಕಿಕೊಂಡಿದ್ದ ನೂರಾರು ಜನರನ್ನು ರಕ್ಷಿಸಲಾಗಿದೆ ಮತ್ತು ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ ಎಂದು ಸಚಿವಾಲಯದ ಅಧಿಕಾರಿ ಇನಾಯತುಲ್ಲಾ ಶುಜಾ ಹೇಳಿದ್ದಾರೆ.
ಸಂತ್ರಸ್ತರಿಗೆ ತುರ್ತು ನೆರವನ್ನು ತಲುಪಿಸಲು ವಿವಿಧ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ ಶುಜಾ ಹೇಳಿದರು.
ರಕ್ತ ಹೆಪ್ಪುಗಟ್ಟುವ ಚಳಿಗಾಲ ಮತ್ತು ಭಾರೀ ಹಿಮಪಾತವು ಅಫ್ಗಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ.
ವಿಶ್ವಸಂಸ್ಥೆಯ ಅಂಕಿಅಂಶಗಳ ಆಧಾರದ ಮೇಲೆ, ಅಫ್ಗಾನ್ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಅಂದರೆ 2.4 ಕೋಟಿಗೂ ಹೆಚ್ಚು ಜನರಿಗೆ ಜೀವ ಉಳಿಸಿಕೊಳ್ಳಲು ಸಹಾಯದ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.