ADVERTISEMENT

ಪಾಕಿಸ್ತಾನಿ ಇಸ್ಲಾಮಿಸ್ಟ್ ಪಕ್ಷದ ಸ್ಥಾಪಕ ಖಾದಿಮ್ ಹುಸೇನ್ ರಿಜ್ವಿ ನಿಧನ

ಏಜೆನ್ಸೀಸ್
Published 20 ನವೆಂಬರ್ 2020, 1:42 IST
Last Updated 20 ನವೆಂಬರ್ 2020, 1:42 IST
ಖಾದಿಮ್ ಹುಸೇನ್ ರಿಜ್ವಿ – ಎಎಫ್‌ಪಿ ಸಂಗ್ರಹ ಚಿತ್ರ
ಖಾದಿಮ್ ಹುಸೇನ್ ರಿಜ್ವಿ – ಎಎಫ್‌ಪಿ ಸಂಗ್ರಹ ಚಿತ್ರ   

ಲಾಹೋರ್: ಪ್ರಭಾವಿ ಪಾಕಿಸ್ತಾನಿ ಇಸ್ಲಾಮಿಸ್ಟ್ ಪಕ್ಷದ ಸ್ಥಾಪಕ ಖಾದಿಮ್ ಹುಸೇನ್ ರಿಜ್ವಿ (54) ನಿಧನರಾಗಿದ್ದಾರೆ. ದೇಶದ ಸಂಪ್ರದಾಯವಾದಿ ಧಾರ್ಮಿಕ ಕಾನೂನುಗಳಿಗೆ ಸುಧಾರಣೆ ತರುವುದನ್ನು ವಿರೋಧಿಸುವುದಕ್ಕಾಗಿ ಈ ಪಕ್ಷವನ್ನು ಸ್ಥಾಪಿಸಲಾಗಿತ್ತು.

2015ರಲ್ಲಿ ತೆಹ್ರೀಕ್–ಇ–ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಸ್ಥಾಪನೆಯಾದ ಬಳಿಕ ಅದರ ನೇತೃತ್ವವನ್ನೂ ರಿಜ್ವಿ ವಹಿಸಿದ್ದರು. ಜ್ವರದಿಂದ ಬಳಲುತ್ತಿದ್ದ ರಿಜ್ವಿ ಅವರು ಪೂರ್ವ ಲಾಹೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಟಿಎಲ್‌ಪಿ ವಕ್ತಾರ ಪಿರ್ ಇಜಾಜ್ ಅಶ್ರಫ್ ತಿಳಿಸಿದ್ದಾರೆ.

ಸಾವಿಗೆ ಕಾರಣವೇನು ಎಂದು ಅಧಿಕೃತ ಮೂಲಗಳು ಇನ್ನೂ ತಿಳಿಸಿಲ್ಲ.

ರಿಜ್ವಿ ಇತ್ತೀಚೆಗೆ ಫ್ರಾನ್ಸ್‌ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ವಾಕ್‌ಸ್ವಾತಂತ್ರ್ಯದ ಭಾಗವಾಗಿ ಇಸ್ಲಾಂ ಅನ್ನು ಟೀಕಿಸುವ ಹಕ್ಕಿದೆ ಎಂದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೇ, ಫ್ರಾನ್ಸ್‌ ರಾಯಭಾರಿಯನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿ ರಿಜ್ವಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.