ಸೆಬಾಸ್ಟಿಯನ್ ಲೆಕೋರ್ನು
(ಎಕ್ಸ್ ಚಿತ್ರ)
ಪ್ಯಾರಿಸ್: ತಮ್ಮ ಸರ್ಕಾರವನ್ನು ಘೋಷಣೆ ಮಾಡಿದ ಮರುದಿನವೇ ಮತ್ತು ಅಧಿಕಾರ ಸ್ವೀಕರಿಸಿದ ಒಂದು ತಿಂಗಳಿಗೂ ಮುನ್ನವೇ ಫ್ರಾನ್ಸ್‌ನ ನೂತನ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರಧಾನಿಯ ರಾಜೀನಾಮೆ ಅಂಗೀಕರಿಸಿದ್ದಾರೆ ಎಂದು ಫ್ರಾನ್ಸ್ ಅಧ್ಯಕ್ಷರ ಕಚೇರಿ ಪ್ರಕಟಣೆ ತಿಳಿಸಿದೆ.
ಲೆಕೋರ್ನು ಮಾಡಿಕೊಂಡಿದ್ದ ಸಚಿವರ ಆಯ್ಕೆ ಟೀಕೆಗೆ ಗುರಿಯಾಗಿತ್ತು. ಅದರಲ್ಲೂ ಮಾಜಿ ಹಣಕಾಸು ಸಚಿವ ಬ್ರೂನೊ ಲಿ ಮೇರಿ ಅವರನ್ನು ರಕ್ಷಣಾ ಇಲಾಖೆಗೆ ಆಯ್ಕೆ ಮಾಡಿದ್ದು ವಿರೋಧಕ್ಕೆ ಕಾರಣವಾಗಿತ್ತು.
ಸಮ್ಮಿಶ್ರ ಶಾಸನಸಭೆಯ ಒಪ್ಪಿಗೆಯನ್ನು ಪಡೆಯುವ ವೇಳೆ ಲೆಕೋರ್ನು ಅವರು, ‘ಮತದಾನವಿಲ್ಲದೇ ಮತ್ತು ಎರಡೂ ಕಡೆಯ ಜನಪ್ರತಿನಿಧಿಗಳ ಅಂತಿಮ ಅಭಿಪ್ರಾಯ ತಗೆದುಕೊಳ್ಳದೇ ಈ ಹಿಂದಿನವರು ವಿಶೇಷ ಅಧಿಕಾರ ಬಳಸಿ ಆಯವ್ಯಯ ಪ್ರಕ್ರಿಯೆ ಜಾರಿಗೊಳಿಸಿದಂತೆ ನಾನು ನಡೆದುಕೊಳ್ಳಲು ಸಿದ್ಧವಿಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.