
ಪ್ರಜಾವಾಣಿ ವಾರ್ತೆ
ಪ್ಯಾರಿಸ್: ದಕ್ಷಿಣ ಅಮೆರಿಕದೊಂದಿಗೆ ಐರೋಪ್ಯ ಒಕ್ಕೂಟ ಮಾಡಿಕೊಳ್ಳುವ ವ್ಯಾಪಾರ ಒಪ್ಪಂದವು ತಮ್ಮ ಬದುಕಿಗೆ ಬೆದರಿಕೆ ಒಡ್ಡಲಿದೆ ಎಂದು ಆರೋಪಿಸಿ ಹಾಗೂ ಆದಾಯ ಕುಸಿದಿರುವುದನ್ನು ಖಂಡಿಸಿ ರೈತರು ಸುಮಾರು 350 ಟ್ರ್ಯಾಕ್ಟರ್‌ಗಳಲ್ಲಿ ಸಾಗಿ ಸಂಸತ್‌ಗೆ ಮುತ್ತಿಗೆ ಹಾಕಲು ಮಂಗಳವಾರ ಯತ್ನಿಸಿದರು.
ಟ್ರ್ಯಾಕ್ಟರ್‌ಗಳು ರಸ್ತೆಗಿಳಿದ ಪರಿಣಾಮ ಸಂಸತ್‌ಗೆ ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿ, ಸಂಚಾರಕ್ಕೆ ವ್ಯತ್ಯಯವಾಗಿತ್ತು. ಫ್ರಾನ್ಸ್‌ನ ಆಹಾರ ಭದ್ರತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು. ಭದ್ರತಾ ಸಿಬ್ಬಂದಿ ಟ್ರ್ಯಾಕ್ಟರ್‌ಗಳನ್ನು ತಡೆದರು.
‘ರೈತರಿಗೆ ಅನುಕೂಲವಾಗುವಂತಹ ನಿರ್ಣಯಗಳನ್ನು ಸರ್ಕಾರ ಶೀಘ್ರವೇ ಘೋಷಿಸಲಿದೆ’ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.