ಇಸ್ಲಾಮಾಬಾದ್ (ಪಿಟಿಐ): ಉಗ್ರರಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಡುವ ಜಾಗತಿಕ ಮಟ್ಟದ ಸಂಸ್ಥೆಯಾದ ಹಣಕಾಸು ಕಾರ್ಯಪಡೆಯು (ಎಫ್‌ಎಟಿಎಫ್), ನಿಷೇಧಿತ ಭಯೋತ್ಪಾದಕ ಸಂಘಟನೆಗಳು ಹಾಗೂ ಮದರಸಾಗಳ ನಡುವಿನ ನಂಟಿನ ಬಗ್ಗೆ ಪಾಕಿಸ್ತಾನಕ್ಕೆ 150 ಪ್ರಶ್ನೆಗಳನ್ನು ಕೇಳಿದೆ.
ನಿಷೇಧಿತ ಭಯೋತ್ಪಾದಕ ಸಂಘಟನೆಗಳು ನಡೆಸುತ್ತಿರುವ ಮದರಸಾಗಳಿಗೆ ಸಂಬಂಧಿಸಿದಂತೆ ಈ ಮೊದಲು ಕೇಳಿದ್ದ 22 ಪ್ರಶ್ನೆಗಳಿಗೆ ಪಾಕಿಸ್ತಾನ ಡಿ. 6ರಂದು ಉತ್ತರ ನೀಡಿತ್ತು.
‘ಇದಕ್ಕೆ ಪ್ರತಿಯಾಗಿ, ಎಫ್‌ಎಟಿಎಫ್ ಪುನಃ 150 ಪ್ರಶ್ನೆಗಳನ್ನು ಕೇಳಿದೆ. ಈ ಮದರಸಾಗಳ ವಿರುದ್ಧ ಕೈಗೊಂಡ ಕ್ರಮ, ಕೆಲವು ಪ್ರಶ್ನೆಗಳಿಗೆ ಸ್ಪಷ್ಟೀಕರಣ ಸೇರಿದಂತೆ ಜನವರಿ 8ರ ಒಳಗಾಗಿ ಉತ್ತರಿಸುವಂತೆ ಸೂಚಿಸಿದೆ’ ಎಂದು ಉನ್ನತ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ‘ದಿ ನ್ಯೂಸ್’ ವರದಿ ಮಾಡಿದೆ. ‘ಹಫೀಜ್ ಸಯೀದ್ 300 ಅಂಗಸಂಸ್ಥೆಗಳನ್ನು ಹೊಂದಿದ್ದಾನೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.