ADVERTISEMENT

ಬಾಗ್ದಾದ್ ಟ್ಯಾಂಕರ್ ಸ್ಫೋಟ: ಕನಿಷ್ಠ 9 ಮಂದಿ ಸಾವು

13ಕ್ಕೂ ಅಧಿಕ ಜನರಿಗೆ ಗಂಭೀರ ಗಾಯ

ಏಜೆನ್ಸೀಸ್
Published 30 ಅಕ್ಟೋಬರ್ 2022, 1:58 IST
Last Updated 30 ಅಕ್ಟೋಬರ್ 2022, 1:58 IST
   

ಬಾಗ್ದಾದ್: ಇರಾಕ್‌ನ ರಾಜಧಾನಿ ಬಾಗ್ದಾದ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಗ್ಯಾಸ್ ಟ್ಯಾಂಕರ್ ಸ್ಫೋಟದಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದು, 13ಕ್ಕೂ ಅಧಿಕ ಜನರು ಗಂಭೀರ ಗಾಯಗೊಂಡಿದ್ದಾರೆ ಎಂದು ಭದ್ರತಾ ಪಡೆಗಳು ಹೇಳಿವೆ.

ಇದೊಂದು ಅಪಘಾತ, ಹೊರತು ಯಾವುದೇ ಉದ್ದೇಶಪೂರ್ವಕ ದಾಳಿ ಆಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಬಾಗ್ದಾದ್‌ನ ಜನವಸತಿ ಪ್ರದೇಶದ ಸಮೀಪದ ಫುಟ್ಬಾಲ್ ಅಂಗಣದ ಸಮೀಪದ ಕಾರ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದೆ. ಸ್ಫೋಟದ ಸದ್ದು ಬಾಗ್ದಾದ್ ನಗರದಾದ್ಯಂತ ಕೇಳಿಸಿದೆ ಎಂದು ಭದ್ರತಾ ಪಡೆ ತಿಳಿಸಿದೆ.

ADVERTISEMENT

ಸ್ಫೋಟಕ್ಕೆ ಸಿಲುಕಿ 9 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭದ್ರತಾ ಪಡೆ ಕಮಾಂಡರ್ ಅಹ್ಮದ್ ಸಲೀಂ ಹೇಳಿಕೆ ನೀಡಿದ್ದಾರೆ.

ಟ್ಯಾಂಕರ್ ಸ್ಫೋಟ ಪ್ರಕರಣದ ತನಿಖೆಗೆ ಸರ್ಕಾರ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.