ADVERTISEMENT

ಅಟ್ಲಾಂಟಾದ ಮಸಾಜ್ ಪಾರ್ಲರ್‌ಗಳ ಮೇಲೆ ಗುಂಡಿನ ದಾಳಿ: ಎಂಟು ಮಂದಿ ಸಾವು

ಏಜೆನ್ಸೀಸ್
Published 17 ಮಾರ್ಚ್ 2021, 6:07 IST
Last Updated 17 ಮಾರ್ಚ್ 2021, 6:07 IST
ಗುಂಡಿನ ದಾಳಿ ನಡೆದ ಅಟ್ಲಾಂಟಾದ ಗೋಲ್ಡನ್ ಸ್ಪಾ ಮಸಾಜ್ ಪಾರ್ಲರ್
ಗುಂಡಿನ ದಾಳಿ ನಡೆದ ಅಟ್ಲಾಂಟಾದ ಗೋಲ್ಡನ್ ಸ್ಪಾ ಮಸಾಜ್ ಪಾರ್ಲರ್   

ಅಟ್ಲಾಂಟಾ, ಅಮೆರಿಕ: ಇಲ್ಲಿನ ಎರಡು ಮಸಾಜ್‌ ಪಾರ್ಲರ್‌ಗಳು ಮತ್ತು ಉಪನಗರಗಳಲ್ಲಿ ಮಂಗಳವಾರ ಸಂಜೆ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವಿಗೀಡಾಗಿದ್ದು,ಮೃತರಲ್ಲಿ ಹಲವರು ಏಷ್ಯಾ ಮೂಲದ ಮಹಿಳೆಯರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನೈರುತ್ಯ ಜಾರ್ಜಿಯಾದಲ್ಲಿ 21 ವರ್ಷದ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಟ್ಲಾಂಟಾದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಅಕ್ವರ್ತ್‌ನ ಹಳ್ಳಿಯ ಸಮೀಪದಲ್ಲಿರುವ ಸ್ಟ್ರಿಪ್ ಮಾಲ್‌ನ ಯಂಗ್ಸ್ ಏಷ್ಯನ್ ಮಸಾಜ್ ಪಾರ್ಲರ್‌ ಮೇಲೆ ಸಂಜೆ 5 ಗಂಟೆಗೆ ಗುಂಡಿನ ದಾಳಿ ಆರಂಭವಾಯಿತು. ಘಟನೆಯಲ್ಲಿ ಐವರಿಗೆ ಗುಂಡು ತಗುಲಿತು ಎಂದು ಚೆರೊಕಿ ಕೌಂಟಿ ಶೆರಿಫ್ ಕಚೇರಿಯ ವಕ್ತಾರ ಕ್ಯಾಪ್ಟನ್ ಜೇ ಬೇಕರ್ ಹೇಳಿದ್ದಾರೆ.

ADVERTISEMENT

ಘಟನೆ ನಡೆದ ಸ್ಥಳದಲ್ಲೇ ಇಬ್ಬರು ಮೃತಪಟ್ಟರು.ಮೂವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಹೇಳಿದರು.

ಸಂಜೆ 5. 50 ರ ಸುಮಾರಿಗೆ ಅಟ್ಲಾಂಟಾದ ನೆರೆಯ ಪಟ್ಟಣ ಬಕ್‌ಹೆಡ್‌ನ ಗೋಲ್ಡ್ ಸ್ಪಾ ಮೇಲೆ ಗುಂಡಿನ ದಾಳಿ ನಡೆದು, ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.