ADVERTISEMENT

ಜರ್ಮನಿ: ಕೃಷಿ ಸಹಾಯಧನ ಕಡಿತಕ್ಕೆ ವಿರೋಧ

ಏಜೆನ್ಸೀಸ್
Published 29 ಜನವರಿ 2024, 15:44 IST
Last Updated 29 ಜನವರಿ 2024, 15:44 IST
<div class="paragraphs"><p>ಕೃಷಿ ಸಹಾಯಧನ ರದ್ದುಪಡಿಸುವುದನ್ನು ವಿರೋಧಿಸಿ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ರೈತರು ಟ್ರ್ಯಾಕ್ಟರ್‌ಗಳನ್ನು ರಸ್ತೆಗಳಿಗೆ ಅಡ್ಡ ನಿಲ್ಲಿಸಿ ಪ್ರತಿಭಟನೆ ನಡೆಸಿದರು</p></div>

ಕೃಷಿ ಸಹಾಯಧನ ರದ್ದುಪಡಿಸುವುದನ್ನು ವಿರೋಧಿಸಿ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ರೈತರು ಟ್ರ್ಯಾಕ್ಟರ್‌ಗಳನ್ನು ರಸ್ತೆಗಳಿಗೆ ಅಡ್ಡ ನಿಲ್ಲಿಸಿ ಪ್ರತಿಭಟನೆ ನಡೆಸಿದರು

   

ಬರ್ಲಿನ್: ಕೃಷಿ ಸಹಾಯಧನ ಕಡಿತಗೊಳಿಸಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಜರ್ಮನಿ ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

ನೂರಾರು ರೈತರು ಟ್ರ್ಯಾಕ್ಟರ್‌ಗಳಿಂದ ಪ್ರಮುಖ ಬಂದರುಗಳಿಗೆ ಮುತ್ತಿಗೆ ಹಾಕಿದ್ದಾರೆ. 

ADVERTISEMENT

ಹ್ಯಾಂಬರ್ಗ್ ಬಂದರು ಪ್ರದೇಶಕ್ಕೆ ತೆರಳಲು ಸಾಧ್ಯವಾಗದಂತೆ ರೈತರು 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿದ್ದಾರೆ. ಇದರಿಂದ, ಅಂತರರಾಷ್ಟ್ರೀಯ ಸರಕು ಸಾಗಣೆಗೆ ಅಡ್ಡಿಯಾಗಿದೆ. ಜತೆಗೆ, ಜರ್ಮನಿಯ ಉತ್ತರ ಕರಾವಳಿಯ ಬಂದರುಗಳ ಕಾರ್ಯಾಚರಣೆಗೂ ರೈತರು ಅಡ್ಡಿಪಡಿಸಿದ್ದಾರೆ. 

ಜರ್ಮನಿ ಚಾನ್ಸಲರ್ ಒಲಾಫ್ ಸ್ಕಾಲ್ಜ್ ಅವರು, ಕೃಷಿವ ವಲಯಕ್ಕೆ ನೀಡುವ ಸಹಾಯಧನವನ್ನು ರದ್ದುಪಡಿಸಲು ಯೋಜಿಸಿದ ಕಳೆದ ವರ್ಷದ ಡಿಸೆಂಬರ್ ತಿಂಗಳಿನಿಂದಲೂ, ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.